ಸ್ತೋತ್ರ 17 Yesu Embuva Naama ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಯೇಸು ಎಂಬುವ ನಾಮ – ತೋಷವೀಯುವ ನಾಮ
ಈಶ ಮೆಸ್ಸೀಯನ ನಾಮ ಪುಣ್ಯಕೆ ಧಾಮ
1. ದಿವಿಯಿಂದ ಭುವಿಗಿಳಿದ – ದೇವಕುಮಾರನಿಗೆ
ದಿವಿದೂತನು ತಂದ – ಸುಂದರನಾಮ
ಭುವನದ ಜನವನು – ಪಾವನಗೈಯುವ
ಪವಿತ್ರ ಸುತಗೆ ದೇವ – ಕೊಟ್ಟಿಹ ದಿವ್ಯನಾಮ
2. ಸಂತತ ಸಂತರಿಗೆ – ಸಂತಸವೀವ ನಾಮ
ಚಿಂತೆಯ ತಾಪವ – ಹರಿಸುತ ಬಳಲಿ
ದಂಥ ಜನಕೆ ಸುವಿ – ಶ್ರಾಂತಿಯನ್ನೀವ ನಾಮ
ಸಂತಶಾಂತಿಯು ಕ್ರಿಸ್ತ – ಸ್ವಾಮಿಯ ದಿವ್ಯನಾಮ
3. ಬಲವಿಲ್ಲದವರಿಗೆ – ಬಲವನೀಯುವ ನಾಮ
ಗೆಲುವಿಲ್ಲದವರಿಗೆ – ಗೆಲುವೀವ ನಾಮ
ತ್ರಿಲೋಕದವರೆಲ್ಲಾ – ಒಲಿದು ವಂದಿಪ ನಾಮ
ತಲತಲಾಂತರದಲ್ಲಿ – ಮೆರೆಯುವ ದಿವ್ಯನಾಮ
Yesu Embuva Naama – Toshaveeyuva Naama
Eesha Messeeyana Naama Punyake Dhaama
1. Diviyinda Bhuvigilida – Devakumaaranige
Dividootanu Tanda – Sundaranaama
Bhuvanada Janavanu – Paavanagaiyuva
Pavitra Sutage Deva – Kottiha Divyanaama
2. Santata Santarige – Santasaveeva Naama
Chinteya Taapava – Harisuta Balali
Dantha Janake Suvi – Shraantiyanneeva Naama
Santashaantiyu Krista – Swaamiya Divyanaama
3. Balavilladavarige – Balavaneeyuva Naama
Geluvilladavarige – Geluveeva Naama
Trilokadavarellaa – Olidu Vandipa Naama
Talatalaantaradalli – Mereyuva Divyanaama