ಸ್ತೋತ್ರ 151 Bharavasavanu Padeyiri – Rakshakanalli ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಭರವಸವನು ಪಡೆಯಿರಿ – ರಕ್ಷಕನಲ್ಲಿ
ಸ್ಥಿರಶ್ರದ್ದೆಯ ಪಡಿಯಿರಿ
ನಿರೀಕ್ಷಿಸಿದವುಗಳ ಖರೆಯು ಧಾರಿಣಿಯಲ್ಲಿ
ಮರೆಯಾದ ಕಾರ್ಯವ ಹಿರಿದು ಸಾಕ್ಷಿಯಾದ
1. ದುರಿತದಿ ಬಿಡಿಸುವಂಥ – ಭೂಮಿಯೊಳಾ
ದರಣೆಯ ನೀಡುವಂಥ
ಪರತರ ಭಾಗ್ಯವಂತರಲ್ಲಿ ತೋರುತ್ತ
ಗುರು ಯೇಸು ಸ್ವಾಮಿಯನ್ನರಸಾಗಿ ಭಾವಿಸುವ
2. ಶೋಧನೆಯಲ್ಲಿ ನಿಲ್ಲಲು – ಧೈರ್ಯವ ಕೊಟ್ಟು
ಮೇದಿನಿಯೊಳು ತಾಳಲು
ಮೇದಿನಿಯೊಳು ತಾಳಲು
ಮೇದಿನಿಯೊಳು ಮಹಾಬಾಧೆ ಯುಳ್ಳಾತ್ಮವಂ
ಕಾದು ಕ್ರಿಸ್ತನಡಿಗೆ ಮೋದದಿಂ ತರುವಂಥ
3. ಇಡದು ಸ್ವನೀತಿಯೊಳು – ನಂಬಿಕೆಯನ್ನು
ಬಿಡದು ಗುರುಪುಣ್ಯದೊಳು
ದಡಸೇರಲಿಕ್ಕೆಮ್ಮ ನಡಿಸಲಿದರ ಹೊರುತು
ಹುಡುಕಿತರೆಂದೆಂದೂ ಪೊಡವಿಯೊಳ್ ಸಿಕ್ಕದ
4. ಹಿರಿಯರು ಜಯಗೊಂಡರು – ಈ ಹದನದಿಂ
ಪರಲೋಕ ಸೇರಿದರು
ಪರಮಕರ್ತನ ದಿವ್ಯಮರಣಜೀವಗಳಲ್ಲಿ
ಸರಿಯಾಗಿ ಕಾಣಿಸಿದ ವರರ ಸದ್ಗುಣವಾದ
5. ಹಸನಾದ ದ್ರುಷ್ಟಿಯನು – ವೇಗದಿ ಸಂಪಾ
ದಿಸಿರಿ ಈ ದುರ್ಭೀನನು
ಅಸದಳರಾದ ನಾವಸುಗಾವಲನು ಹೊಂದ
ಲಸು ವಿನೊಡೆಯನು ಕೊಡುವ ಅಸಮಾನವರವಾದ
Bharavasavanu Padeyiri – Rakshakanalli
Sthirashraddeya Padiyiri
Nireekshisidavugala Khareyu Dhaariniyalli
Mareyaada Kaaryava Hiridu Saakshiyaada
1. Duritadi Bidisuvantha – Bhoomiyolaa
Daraneya Needuvantha
Paratara Bhaagyavantaralli Torutta
Guru Yesu Swaamiyannarasaagi Bhaavisuva
2. Shodhaneyalli Nillalu – Dhairyava Kottu
Vedaneyolu Taalalu
Mediniyolu Taalalu
Mediniyolu Mahaabaadheyullatmavam
Kaadu Kristanadige Modadim Taruvantha
3. Idadu Swaneetiyolu – Nambikeyannu
Bidadu Gurupunyadolu
Dadaseralikkemma Nadisalidara Horutu
Hudukitarendendoo Podaviyol Sikkada
4. Hiriyaru Jayagondaru- Ee Hadanadim
Paraloka Seridaru
Paramakartana Divyamarana jeevagalalli
Sariyaagi Kaanisida Varara Sadgunavaada
5. Hasanaada Drushtiyanu – Vegadi Sampaa
disiri Ee Durbheenanu
Asadalaraada Naavasu gaavalanu Honda
Lasu Vinodeyanu Koduva Asamaanavaravaada