ಸ್ತೋತ್ರ 15 Jenina Ruchiginta Yesu Sunaamavavu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಜೇನಿನ ರುಚಿಗಿಂತ ಯೇಸು ಸುನಾಮವವು ದಿವ್ಯ ಮಧುರವಾದ್ದೆ -ಅದನು
ಧ್ಯಾನಕ್ಕೆ ತಂದು ಹೊಂದಲು ಬನ್ನಿರಾತನ ಸೇವಕರೇ
1. ಲೋಕದ ಮೇಲೆ ಪ್ರೀತಿಯ ತುಂಬಿ ಕಷ್ಟಗಳನು ತಾಳಿ – ಪಾಪ
ಶೋಕವ ಹರಿಸಿ ಶಾಪವ ಕಳೆದನು ಧ್ಯಾನಿಸು ನೀ ಮನವೇ
2. ಪಾಪಿಯನುಳಿಸಲು ಹೀಗೆಯೇ ತನ್ನ ಪ್ರಾಣವನೇ ಕೊಟ್ಟ -ಶ್ರೇಷ್ಠ
ಭೂಪನ ಕರುಣೆ ಸುಸ್ಥಿರವದನು ಬಿಡದೆ ಸೇವಿಸಿರಿ
3. ಮೇಲನು ಕೊಡಿಸಲು ಕರುಣೆಯಿಂದಾಳ್ವ ರಕ್ಷಕನಾದವನು -ನಿನ್ನ
ಪಾಲಿಗೆ ಸಿಕ್ಕಲು ಶ್ರಮೆಯನೆ ಹೊಂದಿ ಬೇಗನೆ ನೀ ಪಡಕೋ
4. ಶ್ರಮೆಯೊಳಗಿಂಪು ಚಿಂತೆಗೆ ಶಾಂತಿ ಕೊಡುವಿಷ್ಟನ ಬಳಿಗೆ – ಬೇಗ
ಭ್ರಮೆಯಿಂ ಬಂದು ಪ್ರಾರ್ಥನೆಮಾಡಿ ಪಡಕೋ ನೀ ಮನವೇ
5. ಮಾತಪಿತರಂ ಬಂಧುಬಳಗವಂ ಆತುಕೊಂಡರೇನು – ನೀನು
ನೀತಿಯ ಕ್ರಿಸ್ತನ ಪ್ರೀತಿಯ ಹರ್ಷದಿಂ ಸಂಭ್ರಮಿಸು ಮನವೇ
6. ನೂತನ ಹಿಮದ ಹಾಗೆ ಜಗತ್ತು ಸೂಕ್ಷ್ಮದಿ ಕಳೆದೀತು – ಎಂದೂ
ಆತನ ಪದವಂ ಭರವಸದಿಂದ ವಿಶ್ವಾಸಿಸಿ ಬದುಕು
7. ಭೂಲೋಕದವರೂ ಮೆಲ್ಲೋಕದವರೂ ಕೀರ್ತಿಪ ನಾಮವ – ಭಜಿಸಿ
ಮೇಲಿನ ಧನವಂ ಹೊಂದುವಿರೆಲ್ಲರೂ ನಿಶ್ಚಯ ನಿಶ್ಚಯವೇ
Jenina Ruchiginta Yesu Sunaamavavu Divya Madhuravaadde-Adanu
Dhyaanakke Tandu Hondalu Banniraatana Sevakare
1. Lokada Mele Preetiya Tumbi Kashtagalanu Taali- Paapa
Shokava Harisi Shaapava Kaledanu Dhyaanisu Nee Manave
2. Paapiyanulisalu Heegeye Tanna Praanavane Kotta-Shreshta
Bhoopana Karune Susthiravadanu Bidade Sevisiri
3. Melanu Kodisalu Karuneyindaalva Rakshakanaadavanu-Ninna
Paalige Sikkalu Shrameyane Hondi Begane Nee Padako
4. Shrameyolagimpu Chintege Shaanti Koduvishtana Balige -Bega
Bhrameyim Bandu Praarthanemaadi Padako Nee Manave
5. Maatapitaram Bandhubalagavam Aatukondarenu – Neenu
Neetiya Kristana Preetiya Harshadim Sambhramisu Manave
6. Nootana Himada Haage Jagattu Sookshmadi Kaledeetu – Endoo
Aatana Padavam Bharavasadinda Vishwaasisi Baduku
7. Bhoolokadavaroo Mellokadavaroo Keertipa Naamava -Bhajisi
Melina Dhanavam Honduvirellaroo Nishchaya Nishchayave