ಸ್ತೋತ್ರ 135 Yesu Swaamiya Naamapaaduva ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಯೇಸು ಸ್ವಾಮಿಯ ನಾಮಪಾಡುವ – ಕ್ರಿಸ್ತ
ದಾಸರೊಂದಿಗೆ ಸೇರಿ ನಡೆಯುವ
1. ಅಜ್ಞಾನಿ ಕೂಟವ ತೊರೆಯುವ – ಒಳ್ಳೆ
ಸುಜ್ಞಾನಿಕೂಟವ ಸೇರುವ
2. ಲೋಕದಿಚ್ಚೆಗಳನೀಡಾಡುವ – ಪರ
ಲೋಕದಾಸೆಯ ಹಿಡಿದಾಡುವ
3. ವೇದಮಾರ್ಗವ ನೆಲೆ ಶೋಧಿಸುವ – ಸತ್ಯ
ಬೋಧೆಯನು ಕೇಳಿ ಧ್ಯಾನಿಸುವ
4. ಸತ್ಯಮಾರ್ಗದಿ ನೆಲೆಗೊಳ್ಳುವ – ದೈವ
ಕೃತ್ಯಮಾರ್ಗದಿ ನಡಕೊಳ್ಳುವ
5. ನಿತ್ಯವು ತಂದೆಯ ಪ್ರಾರ್ಥಿಸುವ – ದುಷ್ಟ
ಕ್ರುತ್ಯಗಳನು ಬಿಟ್ಟು ವರ್ತಿಸುವ
6. ಕರ್ತನ ಮರಣವ ಧ್ಯಾನಿಸುವ – ಲೋಕ
ವ್ಯರ್ಥಚಿಂತೆಯನ್ನೆಲ್ಲ ನೀಗುವ
7. ಸೋದರ ಪ್ರೀತಿಯ ಮಾಡುವ – ವರ
ಮೋದದ ರಕ್ಷಣೆ ಕೋರುವ
8. ಒಬ್ಬರಿಗೊಬ್ಬರು ಮನ್ನಿಸುವ – ಚಿತ್ತ
ದುಬ್ಬರದಿಂದಲಿ ಸ್ನೇಹಿಸುವ
9. ನಡೆಯಲಿ ಸ್ವಾಮಿಯ ಮೆಚ್ಚಿಸುವ – ಕಟ್ಟ
ಕಡೆಯಲಿ ಕರ್ತನ ಬಳಿ ಸೇರುವ
Yesu Swaamiya Naamapaaduva – Krista
Daasarondige Seri Nadeyuva
1. Agnaani Kootava Toreyuva – Olle
Sugnaanikootava Seruva
2. Lokadichhe galaneedaaduva – Para
Lokadaaseya Hididaaduva
3. Vedamaargava Nele Shodhisuva – Satya
Bodheyanu Keli Dhyaanisuva
4. Satyamaargadi Nelegolluva – Daiva
Krutyamaargadi Nadakolluva
5. Nityavu Tandeya Prarthisuva – Dushta
Krutyagalanu Bittu Vartisuva
6. Kartana Maranava Dhyaanisuva – Loka
Vyarthachinteyannella Neeguva
7. Sodara Preetiya Maaduva – Vara
Modada Rakshane Koruva
8. Obbarigobbaru Mannisuva – Chitta
Dubbaradindali Snehisuva
9. Nadeyali Swaamiya Mechhisuva – Katta
Kadeyali Kartana Bali Seruva