ಸ್ತೋತ್ರ 127 Dikku Kaanadavanu Naanaade ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದಿಕ್ಕು ಕಾಣದವನು ನಾನಾದೆ –
ನಿನ್ನ ಸನ್ನಿಧಿ ಕರವ ಮುಗಿದುಸೇವೆಗೈಯುವೆ
ಅಕ್ಕರೆಯಿಂದ ಕೈಮುಗಿದವರ – ಅರೆಮರೆಗಳನು ತೀರಿಸಿ ಜವದಿ
ಧಿಕ್ಕರಿಸದೆ ಯಾದರಿಸಯ್ಯ ನಿತ್ಯನಾದ ದೇವತನಯಾ
1. ಘೋರಪಾಪ ಭಾರವೆಲ್ಲವ – ಹೊತ್ತು ನರಳುವ –
ನರರೆ ಬನ್ನಿರಿ ಬನ್ನಿರಿ ಬಳಿಗೆಂದು
ತೀರದ ದಯದಿಂ ಕರೆದ ವೇದ – ಸಾರವಾಕ್ಯವ ತಿಳಿಯದೆ ಬಹಳ
ಭಾರಹೊಂದಿ ಕಡೆಗೆ ನಿನ್ನ ಬಳಿಗೆ ಸೇರಿದೆ – ಪಾಲಿಸು ದೇವಾ
2. ಬಲವು ಇಲ್ಲದವನು ನಾನಾದೆ ಕೇವಲವಾಗಿ –
ಕಲುಶಗಳನು ಮಾಡಿ ಬಳಲಿದೆ
ಇಳೆಯೊಳು ನಾ ಗೈಯುವಂಥ – ಕಲುಷಚಾಲಗಳನು ನೀನೆ
ಅಳಿಸಿಬಿಟ್ಟು ಆತ್ಮಕಧಿಕಬಲವ ನೀಡಿ – ಹರಸು ದೇವಾ
3. ವಂದನೆಗಳನ್ನರ್ಪಿಸುವ ದೇವಾ – ನನ್ನ ಹೃದಯದಲ್ಲಿರುವ –
ಸಂಶಯಂಗಳನಳಿಸು ನೀ ದೇವಾ
ಸಂದೇಹಗಳ ಬಿಡಿಸಿ ಶಾಸ್ತ್ರದಲ್ಲಿರುವಂಥ – ಸಾರವಾಕ್ಯಾ
ನಂದಪದವಿಯನ್ನನುಭವಿಸಲು – ಹೃದಯವನ್ನು ಬೆಳಗಿಸೈಯ್ಯಾ
Dikku Kaanadavanu Naanaade –
Ninna Sannidhi Karava Mugidusevegaiyuve
Akkareyinda Kaimugidavara – Aremaregalanu Teerisi Javadi
Dhikkarisade yaadarisayya Nityanaada Devatanayaa
1. Ghorapaapa bhaaravellava – Hottu Naraluva –
Narare Banniri Banniri Baligendu
Teerada Dayadim Kareda Veda – Saaravaakyava Tiliyade Bahala
Bhaarahondi Kadege Ninna Balige Seride – Paalisu Devaa
2. Balavu Illadavanu Naanaade Kevalavaagi –
Kalushagalanu Maadi Balalide
Ileyolu Naa Gaiyuvantha – Kalushachaalagalanu Neene
Alisibittu Aatmakadhikabalava Needi – Harasu Devaa
3. Vandanegalannarpisuva Devaa – Nanna Hrudayadalliruva –
Samshayangalanalisu Nee Devaa
Sandehagala Bidisi Shaastradalliruvantha – Saaravaakyaa
Nandapadavi yannanubhavisalu – Hrudayavannu Belagisaiyyaa