ಸ್ತೋತ್ರ 121 Enna Devaa Dayadi Paalisai ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಎನ್ನ ದೇವಾ ದಯದಿ ಪಾಲಿಸೈ – ನಿನ್ನ ಕ್ರುಪೆಯಂ ತೋರಿ
ಖಿನ್ನ ದ್ರೋಹಿಯನ್ನು ಆಲಿಸೈ
ಬೆನ್ನು ಹಿಡಿದು ಬರುವ ದುರಿತವನ್ನು ತಿಳುಕೊಂಡೆನೀಗ
ಮನ್ನಿಸೈಯ್ಯಾ ಪ್ರೀತಿಯಿಂದ ಲುನ್ನತಾತ್ಮನನ್ನು ಕೊಟ್ಟು
1. ಪರಮೋತ್ತಮನೀತಿವಂತನೇ – ನಿರುತವಾರ್ತೆಯಲಿ
ಪರಸತ್ಯ ಸರ್ವಾಧೀಶನೇ
ದುರುಳನಾದ ನಾನು ಜನ್ಮದಿಂದ ಪರಮಪಾಪಿ ಎಂಬುದನ್ನು
ಅರಿಕೆಗೈದೆನೈ ದಿವ್ಯಚರಣಾರವಿಂದದಲ್ಲಿ
2. ಮರೆಮಾಡು ಪ್ರೇಮಾನನವನ್ನು – ದುರುಳತನಗಳಿಗೆ
ಇರಿಸೆನ್ನೊಳ್ ಶುದ್ದ ಮನವನ್ನು
ಹೊರಗೆ ಹಾಕದೆ ಮಹಾಪರಿಶುದ್ದ ಸಮುಖದಿಂದ
ತಿರುಗಿಯಾನಂದವಿತ್ತು ಪರನೇ ಊದ್ದರಿಸೈಯ್ಯಾ
3. ತೆರೆಯೆನ್ನ ಬಾಯ್ದುಟಿಗಳನ್ನು – ಪರಿಪಾಲಿಸುವವನೇ
ಹರುಷರಾಗದಿಂದ ನುತಿಪೆನು
ತರತರದರ್ಪಣೆಗಳನ್ನು ಗುರುವೇ ನೀ ಮೆಚ್ಚುವದಿಲ್ಲ
ಮುರಿದಂಥ ಹೃದಯವನ್ನು ಕರುಣೆಯಿಂದಲೇ ನೀಡಿ
Enna Devaa Dayadi Paalisai – Ninna Krupeyam Tori
Khinna Drohiyannu Aalisai
Bennu Hididu Baruva Duritavannu Tilukondeneega
Mannisaiyyaa Preetiyinda lunnataatmanannu Kottu
1. Paramottamaneetivantane – Nirutavaarteyali
Parasatyasarvaadheeshane
Durulanaada Naanu Janmadinda Paramapaapi Embudannu
Arikegaidenai Divyacharanaaravindadalli
2. Maremaadu Premaananavannu – Durulatanagalige
Irisennol Shudda Manavannu
Horage Haakade Mahaaparishudda Samukhadinda
Tirugiyaanandavittu Parane Uddarisaiyyaa
3. Tereyenna Baaydutigalannu – Paripaalisuvavane
Harusharaagadinda Nutipenu
Tarataradarpanegalannu Guruve Nee Mechhuvadilla
Muridantha Hrudayavannu Karuneyindale Needi