ಸ್ತೋತ್ರ 110 Devara Katleya Meeradiru – Nija ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇವರ ಕಟ್ಲೆಯ ಮೀರದಿರು – ನಿಜ
ದೇವರ ಕಟ್ಲೆಯ ಮೀರದಿರು
ದೇವರಾಜ್ಞೆಯನ್ನು ಮೀರುವ ನರರಿಗೆ
ಯಾವ ಸುವರಗಳು ದೊರಕವು ನೀ
1. ದೇವರು ಒಬ್ಬನೆ ಬೇರೆಯವ – ರನು
ಸೇವಿಸ ಕೂಡದು ಭೂಜನರು
ಜೀವರಾಶಿಯಲ್ಲಿ ಯಾವ ರೂಪವನೂ
ಭಾವಿಸಿ ಪೂಜಿಸಕೂಡದು ನೀ
2. ಆತನ ನಾಮವ ಘನಪಡಿಸಿ – ನಿನ್ನ
ಮಾತುಗಳೆಲ್ಲವನುಚ್ಚರಿಸು
ಆತನ ಸಬ್ಬತು ದಿನದಲಿ ಲೋಕದ
ಮಾತುಕೆಳಸಗಳ ತೊಲಗಿಸು ನೀ
3. ತಂದೆತಾಯಿಗಳ ಆಜ್ಞೆಗಳಂ – ಬಹು
ಚಂದದಿ ನಡಿಸಲು ನೆನಪಿರಲಿ
ನಿಂದಿಸಿ ಮನುಜರ ಪ್ರಾಣವ ಕೊಲ್ಲದೆ
ಕುಂದದ ಪ್ರೇಮವ ತೋರಿಸು ನೀ
4. ಜಾರತನವ ನೀ ಹೇಸಿ ತೊಲಗು – ಅದು
ಪಾರದ್ರೋಹವೆಂದು ತಳ್ಳಿಬಿಡು
ಚೋರಕ್ರುತ್ಯವನ್ನು ಮಾಡದೆ ಜಗದೊಳು
ಪೂರಣ ನೀತಿಯ ಸಾಧಿಸು ನೀ
5. ನಿನ್ನ ನೆರೆಯವನ ವಂಚಿಸದೆ – ಆವ
ನನ್ನು ಕೆಡಿಸ ಸಟೆಯಾಡದಿರು
ನಿನ್ನ ನೆರೆಯವನ ಸತಿಯನ್ನು ವಸ್ತುಗ
ಳನ್ನು ಅಪೇಕ್ಷಿಸಕೂಡದು ನೀ
Devara Katleya Meeradiru – Nija
Devara Katleya Meeradiru
Devaraagneyannu Meeruva Nararige
Yaava Suvaragalu Dorakavu Nee
1. Devaru Obbane Bereyava – Ranu
Sevisa Koodadu Bhoojanaru
Jeevaraashiyalli Yaava Roopavanoo
Bhaavisi Poojisakoodadu Nee
2. Aatana Naamava Ghanapadisi – Ninna
Maatugalellavanuchharisu
Aatana Sabbatu Dinadali Lokada
Maatukelasagala Tolagisu Nee
3. Tandetaayigala Aagnegalam – Bahu
Chandadi Nadisalu Nenapirali
Nindisi Manujara Praanava Kollade
Kundada Premava Torisu Nee
4. Jaaratanava Nee Hesi Tolagu – Adu
Paaradrohavendu Tallibidu
Chorakrutyavannu Maadade Jagadolu
Poorana Neetiya Saadhisu Nee
5. Ninna Nereyavana Vanchisade – Ava
Nannu Kedisa Sateyaadadiru
Ninna Nereyavana Satiyannu Vastuga
Lannu Apekshisakoodadu Nee