ಸ್ತೋತ್ರ 194 Daiva Tandeya Sammukha Seruva ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೈವ ತಂದೆಯ ಸಮ್ಮುಖ ಸೇರುವ ಕಾಲವನು ನಾ ನೋಡುವೆ
ಯಾವಕೇಡು ಸಮೀಪಕೈದದ ದಿವ್ಯಲೋಕವ ಸೇರುವೆ
1. ನನ್ನ ತಂದೆಯ ದಿವ್ಯ ನಗರವನೆನ್ನ ಆತ್ಮವು ನೋಡುತೆ
ಇನ್ನು ಭೂತಲದಾಸೆ ನೀಗಿಸ ನನ್ನ ಹೃದಯವು ಬೇಡುತೆ
2. ಈಗ ತಂದೆಯ ಕಾಣದಿದ್ದರೂ ನಿತ್ಯ ಹತ್ತಿರ ಓಡುತ
ಬೇಗ ಸ್ವರ್ಗವ ಸೇರ ಹೆಜ್ಜೆಯ ಮುಂದೆ ಸಾಗಿಸ ನೋಡುತ
3. ಯೇಸು ಕ್ರಿಸ್ತನ ದರ್ಶಿಸಿ ಪೂರ್ಣಭಾಗ್ಯವ ಕಾಣುವೆ
ಗಾಸಿಯೆಲ್ಲವು ಹೋಗಿ ಜೀವಕಿರೀಟ ತಪ್ಪದೆ ಹೊಂದುವೆ
4. ಸಂದುಹೋದೆನ್ನ ಬಂಧುಮಿತ್ರರ ನಾನು ಸಂಧಿಸಿ ನೋಡುತ
ಅಂದು ಎಲ್ಲರ ಕೂಡ ಕಲೆತು ವಿಶೇಷಗೀತವ ಹಾಡುತ
5. ಸಾವ ಕಾಣಲು ಸಾವಿನಿಂದಲೆ ಸಾವ ಗೆಲ್ಲುವೆನಲ್ಲವೇ
ಜೀವಲೋಕವ ನಾನು ಶಾಶ್ವತವಾಗಿ ಹೊಂದುವೆನಲ್ಲವೇ
Daiva Tandeya Sammukha Seruva Kaalavanu Naa Noduve
Yaavakedu Sameepakaidada Divyalokava Seruve
1. Nanna Tandeya Divya Nagaravanenna Aatmavu Nodute
Innu Bhootaladaase Neegisa Nanna Hrudayavu Bedute
2. Eega Tandeya Kaanadiddaroo Nitya Hattira Oduta
Bega Swargava Sera Hejjeya Munde Saagisa Noduta
3. Yesu Kristana Darshisi Poornabhaagyava Kaanuve
Gaasiyellavu Hogi Jeevakireeta Tappade Honduve
4. Sanduhodenna Bandhumitrara Naanu Sandhisi Noduta
Andu Ellara Kooda Kaletu Visheshageetava haaduta
5. Saava Kaanalu Saavinidale Saava Gelluvenallave
Jeevalokava Naanu Shaashvatavaagi Honduvenallave