ಸ್ತೋತ್ರ 170 Karunadim Paalisayyaa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಕರುಣದಿಂ ಪಾಲಿಸಯ್ಯಾ – ವರದಾಯಕಾತ್ಮಾ ಕೃಪಾ
ಕರದಿಂದ ಪೋಷಿಸಯ್ಯಾ
1. ತರಳತನದಿಂ ನಾನು ಪರಾಮಾಜ್ಞೆ ಮೀರಿದಂಥ
ದುರಿತದಿಂದಾದ ಎನ್ನ ಹೊರೆಯನ್ನು ನೀನಿಳಿಸಿ
2. ಬದ್ದ ವಿಷಯದಲ್ಲಿ ಯುದ್ಧತೆ ನಾದೆನಯ್ಯಾ
ಶ್ರದ್ದಾ ಸಹಿತವಾದ ಶುದ್ಧತೆಯನ್ನು ನೀಡಿ
3. ಪೂರಿತವಾಗಿರಿರುವ ಕೋರಿಕೆಯನ್ನು ಕೊಟ್ಟು
ದ್ದಾರಮಾಡಯ್ಯಾ ನಿನ್ನ ಸೇರ ಬಂದವನನ್ನು
4. ಪಾತಕಭರಿತವಾದ ಭೀತಿಮಾನಸದಲ್ಲಿ
ರೀತಿಯನೆಣಿಸಿಯೂ ಪ್ರೀತಿಯನ್ನೇ ಸುರಿಸು
5. ಹೀನಗುಣದಿಂ ನಾನಜ್ಞಾನಿಯಾದೆನು ದೇವಾ
ದಾನವಾಗಿ ಎನ್ನೊಳು ಜ್ಞಾನವನುಗ್ರಹಿಸಿ
6. ಶಕ್ತನೇ ನಿನ್ನ ದಿವ್ಯ ಮುಕ್ತಿಯನ್ನು ಪಡೆಯಲಾ
ಸಕ್ತಿಗೂಡಿದ ನಿಜಭಕ್ತಿಭಾವವನ್ನಿತ್ತು
7. ಎರಗಿ ಬಿನ್ನವಿಸಿದೆ ಚರಣಾರವಿಂದದಲಿ
ದುರಿತನಿವಾರಿಸುತ್ತ ಹರಸಯ್ಯಾ ಎನ್ನೊಡೆಯನೇ
Karunadim Paalisayyaa – Varadaayakaatmaa Krupaa
Karadinda Poshisayyaa
1. Taralatanadim Naanu Paramaagne Meeridantha
Duritadindaada Enna Horeyannu Neenilisi
2. Badda Vishayadalli Yuddate Naadenayyaa
Shraddaa Sahitavaada Shuddateyannu Needi
3. Pooritavaagiriruva Korikeyannu Kottu
Ddaaramaadayyaa Ninna Sera Bandavanannu
4. Paatakabharitavaada Bheetimaanasadalli
Reetiyanenisiyoo Preetiyanne Surisu
5. Heenagunadim Naanagnaaniyaadenu Devaa
Daanavaagi Ennolu Gnaanavanugrahisi
6. Shaktane Ninna Divya Muktiyannu Padeyalaa
Saktigoodida Nijabhaktibhaavavannittu
7. Eragi Binnaviside Charanaaravindadali
Duritanivaarisutta Harasayyaa Ennodeyane