ಸ್ತೋತ್ರ 222 Paramakartane Bhooparagalarasane ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪರಮಕರ್ತನೇ ಭೂಪರಗಳರಸನೇ
ಧರೆಯೊಳೆನ್ನ ತೊರೆಯದಿನ್ನು ಕರದಿ ಪಾಲಿಸೈ
1. ಧರಣಿಮನುಜರ ಸುರುಚಿರ ದಯಾಕರಾ
ಅರಸಿ ನಿನ್ನ ಶರಣ ಹೊಕ್ಕೆ ಭರದಿ ಪಾಲಿಸೈ
2. ದುರಿತ ಭಾರವ ನಾ ಹೊರುತ ಬರುವ
ಹರಸಿ ಪಾಪಭಾರವನಿಳಿಸಿ ಪರನೇ ಪಾಲಿಸೈ
3. ಬರಲು ರೋಗವು ಈ ಶರೀರಕೆ ನಿತ್ಯವು
ಕರುಣವೆರಸಿ ಹರಣವನ್ನು ಸುರಿದು ಪಾಲಿಸೈ
4. ಇರುವ ಬಾಧೆಯೆಮ್ ಬಹುತರದ ವೇಧೇಯಂ
ಹರಿಸಿ ದಿವ್ಯವರಗಳನ್ನು ಬರಿಸಿ ಪಾಲಿಸೈ
5. ಮರಣಕಾಲದಿ ಸ್ವೀಕರಿಸು ಪ್ರೇಮದಿ
ನಿರುತದಲ್ಲು ಸ್ಮರಣೆಮಾಳ್ಪೆ ಗುರುವೇ ಪಾಲಿಸೈ
Paramakartane Bhooparagalarasane
Dhareyolenna Toreyadinnu Karadi Paalisai
1. Dharanimanujara Suruchira Dayaakaraa
Arasi Ninna Sharana Hokke Bharadi Paalisai
2. Durita Bhaarava Naa Horuta Baruva
Harasi Paapabhaaravanilisi Parane Paalisai
3. Baralu Rogavu Ee Shareerake Nityavu
Karunaverasi Haranavannu Suridu Paalisai
4. Iruva Baadheyem Bahutarada Vedheyam
Harisi Divyavaragalannu Barisi Paalisai
5. Maranakaaladi Sweekarisu Premadi
Nirutadallu Smaranemaalpe Guruve Paalisai