ಸ್ತೋತ್ರ 218 Devasutana Mudadolindu Bhajisutirpevu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇವಸುತನ ಮುದದೊಳಿಂದು ಭಜಿಸುತಿರ್ಪೆವು ಆ – ಆ – ಆ – ಆ
1. ತಂದೇ ಎಮ್ಮನು ಸಂದ ವರುಷದೊಳ್
ಚಂದದಿಂದಲಿ ಕಾದು ನಡೆಸಿದೆ
ಬಂದ ದುಗುಡವನ್ನು ಹರಿಸಿ
ತಂದೆ ಮುದುದೊಳಂತ್ಯದಿನಕಾ
ನಂದದಿಂದ ಸ್ವರವನ್ನೆತ್ತಿ ಇಂದೂ ಕೂಡ ಬೇಡಿ ಪಾಡಿ
2. ಪರಮಕರ್ತಾ ನೀ ದುರಿತಭರಿತರ
ಪೊರೆದು ನಡಿಸು ನೀ ಧರೆಯ ಪಯಣದೆ
ಸರುವ ಕಾಲದೊಳಿರುವೆನೆಂದು
ಅರುಹಿದಂತೆ ಅಭಯವಿತ್ತು
ಕರುಣವಿದು ಚರಣಕೆರಗಿ ಬೇಡುತಿರ್ಪ ಕಂದರೆಮಗೆ
3. ನಿನ್ನ ಚಿತ್ತವ ತಿಳಿದು ಹರುಷದಿ
ಸನ್ನುತಾತ್ಮನೇ ನಿನ್ನ ಸೇವಿಸಲ್
ಮನ್ನಿಸುತ್ತ ದುರಿತಗಳನು
ನಿನ್ನ ಪ್ರೇಮದನುಭವವಂ
ಖಿನ್ನಮನದೆ ವರ್ಧಿಸುತ್ತ ನವವರ್ಷದಿ ನಡಿಸು ಕರ್ತಾ
4. ಸದಯಾ ನಿನ್ನಯ ಆಗಮನವನು
ಇದಿರುನೋಡುವ ದಾಸರಂದದಿ
ಮುದದೊಳಿದ್ದು ಸೇವಿಸುತ್ತ
ಪದುಳವಾಂತು ಬಾಳುವಂತೆ
ವಿಧವಿಧದೊಳ್ ಅಭಯನೀಡಿ ಎಮ್ಮ ನಡಿಸು ಬೇಡುತಿರ್ಪೆವು
5. ಮಂಗಳ ಪಿತಗೆ ಮಂಗಳ ಸುತಗೆ
ಮಂಗಳಾತ್ಮಗೆ ಮಂಗಳ ಸಭೆಗೆ
ತುಂಗವರವ ನವವರ್ಷದಿ
ಸಂಗತರಾಗಿ ಪುಂಗವನಂ ಕರವ ಜೋಡಿಸಿ ಬೇಡುತಿರುವ
Devasutana Mudadolindu Bhajisutirpevu Aa – Aa – Aa – Aa
1. Tande Emmanu Sanda Varushadol
Chandadindali Kaadu Nadeside
Banda Dugudavannu Harisi
Tande Mududolanyadinakaa
Nandadinda Swaravanetti Indoo Kooda Bedi Paadi
2. Paramakartaa Nee Duritabharitara
Poredu Nadisu Nee Dhareya Payanade
Saruva Kaaladoliruvenendu
Aruhidante Abhayavittu
Karunavidu Charanakeragi Bedutirpa Kandaremage
3. Ninna Chittava Tilidu Harushadi
Sannutaatmane Ninna Sevisal
Mannisutta Duritagalanu
Ninna Premadanubhavavam
Khinnamanade Vardhisutta Navavarshadi Nadisu Kartaa
4. Sadayaa Ninnaya Aagamanavanu
Idiru Noduva Daasarandadi
Mudadoliddu Sevisutta
Padulavaantu Baaluvante
Vidhavidhadol Abhayaneedi Emma Nadisu Bedutirpevu
5. Mangala Pitage Mangala Sutage
Mangalaatmage Mangala Sabhege
Tungavarava Navavarshadi
Sangataraagi Pungavanam Karava Jodisi Bedutiruva