ಸ್ತೋತ್ರ 122 Kaapaaduvavarillavo – Mahaanubhaava ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಕಾಪಾಡುವವರಿಲ್ಲವೋ – ಮಹಾನುಭಾವ
ಪಾಪಹರಣ ಕಾಣೆನೋ
ಕೋಪಕ್ಕೀಡಾದೆನೋ ಶಾಪಭರಿತನಯ್ಯೋ
ಕೂಪನರಕದಿಂದ ಆಪತ್ಹರಿಸ ಕಾಣೆ
1. ಮಾಡಬಾರದ ಕ್ರುತ್ಯವ ಮಾಡುವೆನೆಂದು
ಕೂಡಲೆಣಿಸಿ ಮಾಡಿದೆ
ಕಾಡುಗುಣದ ಹಾನಿ ಪೀಡೆ ಸಹಿಸಲಾರೆ
ಮೂಡುತ ಹೃದಯದೊಳು ಕಾಡಿತು ಮಿತಿಮೀರಿ
2. ದಿಕ್ಕು ಕಾಣದೆ ಬಂದೆನು – ಎನ್ನಯ ದೇವಾ
ಹೊಕ್ಕೆ ನಾ ನಿನ್ನ ಮೊರೆಯ
ಸೊಕ್ಕಿನಿಂದಲೇ ಕೂಡಿ ಎಕ್ಕಸನರನಾದೆ
ಅಕ್ಕರಸೊಬಗಿನಿಂದ ದಕ್ಕಿಸೋ ಕ್ರುಪಾವರ
Akkarasobagininda Dakkiso Krupaavara
3. ಬಿಟ್ಟೆ ಲೋಕವ ದೂರದಿ – ನಿನ್ಬಳಿ ಸಾರಿ
ಇಟ್ಟೆ ಶ್ರದ್ದೆಯ ನಿನ್ನಲ್ಲಿ
ತಟ್ಟನೆ ಸೆಳೆದೆನ್ನ ನೆಟ್ಟನೆತನದಲ್ಲಿ
ಕೊಟ್ಟು ನಿನ್ನ ಭಯವ ಮುಟ್ಟಸೋ ಪರವನ್ನು
Kaapaaduvavarillavo – Mahaanubhaava
Paapaharana Kaaneno
Kopakkeedaadeno Shaapabharitanayyo
Koopanarakadinda Aapatharisa Kaane
1. Maadabaarada Krutyava Maaduvenendu
Koodalenisi Maadide
Kaadugunada Haani Peede Sahisalaare
Mooduta Hrudayadolu Kaaditu Mitimeeri
2. Dikku Kaanade Bandenu – Ennaya Devaa
Hokke Naa Ninna Moreya
Sokkinindale Koodi Ekkasanaranaade
Akkarasobagininda Dakkiso Krupaavara
3. Bitte Lokava Dooradi – Ninbali Saari
Itte Shraddeya Ninnalli
Tattane Seledenna Nettanetanadalli
Kottu Ninna Bhayava Muttaso Paravannu