ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಅತಿಶಯ ವರವಲ್ಲವೇ – ಕರ್ತನಾದೇಸು
ಅತಿಶಯ ವರವಲ್ಲವೇ
ಮಿತಿಯಿಲ್ಲದ ದೇವಸುತನು ರಕ್ಷಕನಾಗಿ
ಕ್ಷಿತಿಯವರೆಲ್ಲರ್ಗೆ ಗತಿಯುಂಟು ಮಾಡಿದ್ದು
1. ನರಕುಲದವರೆಲ್ಲರೂ – ಪಾಪದಿಂದ
ನರಕಪಾತ್ರರಾದರು
ವರಮುಕ್ತಿ ಮಾರ್ಗವ ನರಿಯದೆಯಲೆಯಲು
ಕರುಣಿಯಾದೇಸುವು ಪೊರೆದು ಬಲಿಯಾದದ್ದು
2. ತೋರುವಖಿಲ ವಸ್ತುವೂ – ಆಕಾಶದ
ತಾರೆ ಚಂದ್ರನು ಸೂರ್ಯನು
ಮೂರು ಲೋಕದೊಳಿಹ ಸಾರಸೃಷ್ಟಿಗಳೆಲ್ಲ
ಈ ರಕ್ಷಕಗೆ ಸರಿಬಾರವು ಇದು ಸತ್ಯ
3. ಉತ್ತಮ ಭಾಗ್ಯಗಳ – ಹೊಂದುವದಕ್ಕೆ
ಎತ್ತ ಹೋದರು ಸಿಕ್ಕವು
ಇತ್ತು ರಕ್ತಕ್ರಯವ ನಿತ್ಯಜೀವಕ್ಕಾಗಿ
ಉತ್ತಾನವನು ಹೊಂದಿ ಭಕ್ತರ ಪೊರೆದದ್ದು
Atishaya Varavallave – Kartanaadesu
Atishaya Varavallave
Mitiyillada Devasutanu Rakshakanaagi
Kshitiyavarellarge Gatiyuntu Maadiddu
1. Narakuladavarellaroo – Paapadinda
Narakapaatraraadaru
Varamukti Maargava Nariyadeyaleyalu
Karuniyaadesuvu Poredu Baliyaadaddu
2. Toruvakhila Vastuvoo – Aakaashada
Taare Chandranu Sooryanu
Mooru Lokadoliha Saarasrushtigalella
Ee Rakshakage Saribaaravu Idu Satya
3. Uttama Bhaagyagala – Honduvadakke
Etta Hodaroo Sikkavu
Ittu Raktakrayava Nityajeevakkaagi
Uttaanavanu Hondi Bhaktara Poredaddu