ಸ್ತೋತ್ರ 213 Raatrikaalavu Banditu Nuti ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ರಾತ್ರಿಕಾಲವು ಬಂದಿತು ನುತಿ – ಪಾತ್ರನಂ ಕೊಂಡಾಡುವ
ಮೈತ್ರಿಯಿಂದೀ ದಿನದ ಜೀವನ – ಯಾತ್ರೆಯೊಳು ಪ್ರಭು ನಡಿಸಿದ
1. ದಿನದಿನವು ನಮ್ಮನ್ನು ದಯಾನಿಧೀ – ನೆನೆದು ಕಾಪಾಡಿದ ಪರಿ
ತನುಮನಂಗಳ ನೀಗಲೂ ಕಾ – ಯೆನುತ ಬೇಡುವ ವಿನಯದಿ
2. ಭಯಜನಕದುರ್ವಿಷಯಗಳ – ದುಸ್ವಪ್ನಗಳ ವೇದನೆಗಳ
ದಯವಿಹೀನರ ಬಾಧೆಯಿಂ ನೆರೆ – ಕಾಯಿಯೆನ್ನುತ ಬೇಡುವ
3. ನಿದ್ದೆಯಲಿ ವಿಶ್ರಾಂತಿಯಂ ನವ – ಚೈತನ್ಯಂಗಳಂ
ಸಿದ್ದಿಪಾ ಪ್ರಭುಪಾದದಡಿಯಲಿ – ಬಿದ್ದು ಪ್ರಾರ್ಥನೆಮಾಡುವ
4. ದೆಸೆಸೆಯೊಳ್ ಎಲ್ಲಾ ಇರುಳು ಮುಸುಕಿ ಇದ್ದರೂ ಕಾಂತಿಯ
ನೆಸೆಯುತೆ ನೀನಿರುಳುಹಗಲು – ಹಸನಾಗಿರಿಸು ಸ್ವಾನ್ತವ
5. ತಂದೆಯೇ ಕೇಳೆಮ್ಮ ಪ್ರಾರ್ಥನೆ – ಇಂದು ಕ್ರಿಸ್ತನ ಮೂಲಕ
ವಂದಿಪೆವು ಪೂತಾತ್ಮಾನಂ ಸಾ – ನಂದದಿಂ ತ್ರಯೈಕನ
Raatrikaalavu Banditu Nuti – Paatranam Kondaaduva
Maitriyindee Dinada Jeevana – Yaatreyolu Prabhu Nadisida
1. Dinadinavu Nammannu Dayaanidhee – Nenedu Kaapaadida Pari
Tanumanangala Neegaloo Kaa – Yenuta Beduva Vinayadi
2. Bhayajanakadurvishayagala – Duswapnagala Vedanegala
Dayaviheenara Baadheyim Nere – Kaayiyennuta Beduva
3. Niddeyali Vishraantiyam Nava – Chaitanyangalam
Siddipaa Prabhupaadadadiyali – Biddu Praarthane maaduva
4. Deseseyol Ellaa Irulu Musuki Iddaroo Kaantiya
Neseyute Neeniruluhagalu – Hasanaagirisu Swaantava
5. Tandeye Kelemma Praarthane – Indu Kristana Moolaka
Vandipevu Pootaatmanam Saa – Nandadim Trayaikana