ಸ್ತೋತ್ರ 93 Devaru Kotta Veda – Sadguniyaade ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇವರು ಕೊಟ್ಟ ವೇದ – ಸದ್ಗುಣಿಯಾದೆ
ಹೋವನ ಆಶೀರ್ವಾದ
ಕಾವಳ ತುಂಬಿದ ಭಾವವ ಭೇದಿಸಿ
ಪಾವನಗೊಳಿಸುವ ಜೀವಬುಗ್ಗೆಯಾದ
1. ಪರಿಶುದ್ದ ಶಾಸ್ತ್ರವಿದು – ಸಜ್ಜನರಿಗೆ
ಪರಮಾಯುವೀವದಿದು
ಧರೆಯಲಿ ಮನುಜರ ದುರಿತವ ತೋರಿಸಿ
ಪರಿಪೂರ್ಣ ಪ್ರೇಮದಿ ಶರಣರಾಗ ಗೈವ
2. ಕೊರತೆಯಿಲ್ಲದ ವಾಕ್ಯವು – ಈ ರತ್ನಕ್ಕೆ
ಸರಿಯಾದದ್ದೇನಿಲ್ಲವು
ಹರುಷದಿಂದಲಿ ಬಿಡದೆ ನಿರುತ ಕೈಕೊಂಡರೆ
ಹಿರಿದಾದ ಭಾಗ್ಯವಂ ತರುವ ದಿವ್ಯವಾದ
3. ಜ್ಞಾನ ತುಂಬಿದ ಬೋಧೆಯು – ಭಕ್ತರಿಗೆಲ್ಲಾ
ಮಾನ ನೀಡುವ ಪ್ರೀತಿಯು
ಹೀನತನವ ಬಿಟ್ಟು ಧ್ಯಾನದಿ ನಡೆದರೆ
ನ್ಯೂನವಿಲ್ಲದಿರುವ ಸಾನಂದ ದೊರಕಿಪ
4. ಸತ್ಯವಾದ ವಾರ್ತೆಯು – ದಿವ್ಯಾತ್ಮನ
ನಿತ್ಯವಾದ ಕೀರ್ತಿಯು
ಹತ್ಯಮಾಡುತ ದುಷ್ಟಕೃತ್ಯಗಳನ್ನೆಲ್ಲಾ
ಮ್ರುತ್ಯುಹೊಂದದ ನಿಜಭೃತ್ಯ ರೊಳ್ಸೇರಿಪ
5. ಸವಿಯಾದ ಪಾನವಿದೇ – ದೊರೆಯುತ್ತೆ ಮಾ
ನವರಿಗೆ ಕ್ರಯವಿಲ್ಲದೆ
ಭುವನದೊಳಿದನು ಗೌರವದಿಂದಲೇ ಆನು
ಭವಿಸುವಂಥವರಿಗೆ ಸುವರವ ನೀಡುವ
Devaru Kotta Veda – Sadguniyaade
Hovana Asheervaada
Kaavala Tumbida Bhaavava Bhedisi
Paavanagolisuva Jeevabuggeyaada
1. Parishudda Shaastravidu – Sajjanarige
Paramaayuveevadidu
Dhareyali Manujara Duritava Torisi
Paripoorna Premadi Sharanaraaga Gaiva
2. Korateyillada Vaakyavau – Ee Ratnakke
Sariyaadaddenillavu
Harushadindali Bidade Niruta Kaikondare
Hiridaada Bhaagyavam Taruva Divyavaada
3. Gnaana Tumbida Bodheyu – Bhaktarigellaa
Maana Needuva Preetiyu
Heenatanava Bittu Dhyaanadi Nadedare
Nyoonavilladiruva Saananda Dorakipa
4. Satyavaad Vaarteyu – Divyaatmana
Nityavaada Keertiyu
Hatyamaaduta Dushtakrutyagalannellaa
Mrutyuhondada Nijabrutyarolseripa
5. Saviyaada Paanavide – Doreyutte Maa
Navarige Krayavillade
Bhuvanadolidanu Gaouravadindale Anu
Bhavisuvanthavarige Suvarava Needuva
