ಸ್ತೋತ್ರ 92 Karunaakara Devaa – Satyaatmana ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಕರುಣಾಕರ ದೇವಾ – ಸತ್ಯಾತ್ಮನ
ವರ ತಾ ಸದ್ಗುಣಭಾವಾ
ಕರವ ಮುಗಿದು ನಿನ್ನ ಚರಣಾಬ್ದದ ಮುಂದೆ
ಎರಗಿ ಬೇಡುವ ಎನ್ನೊಳ್ ಸುರಿಸು ನಿನ್ನಾತ್ಮನ
1. ಮಂದದುರ್ಮತಿಯಿಂದಲೂ – ಪಾಪದಿಂದ
ಕುಂದಿದ ಮನದಿಂದಲೂ
ದುಂದುನಡತೆಯಿಂದ ಬಂಧನಗೊಳ್ಳುತ್ತ
ಕುಂದಿತೆನ್ನಾತ್ಮವು ತಂದೆ ಹರಸು ಎನ್ನ
2. ದುರುಳ ನಡತೆ ಬಿಡಿಸಿ – ಅಜ್ಞಾನದ
ಇರುಳು ಕೃತ್ಯವನಳಿಸಿ
ನಿರುಪಮಗುರು ಯೇಸು ಚರಣಶರಣು ಹೊಕ್ಕು
ಪರಮಭಾಗ್ಯಗಳ ವರವ ಧರಿಸ ಮಾಡೈ
3. ಶಿಲುಬೆಯಡಿಗೆ ನಡಿಸಿ – ದಿವ್ಯರಕ್ತದಿ
ಮಲಿನಮಾನವ ಶುಚಿಸಿ
ಕುಲಗುರು ಯೇಸುವ ಹಲವುಕಾಲವು ನಂಬಿ
ಬಲವಾಗಿ ಸೇವಿಸ ಸಲಹು ಸಲಹು ನಿತ್ಯ
Karunaakara Devaa – Satyaatmana
Vara Taa Sadgunabhaavaa
Karava Mugidu Ninna Charanaabdada Munde
Eragi Beduva Ennol Surisu Ninnaatmana
1. Mandadurmatiyindaloo – Paapadinda
Kundida Manadindaloo
Dundu Nadateyinda Bandhanagollutta
Kunditennaatmavu Tande Harasu Enna
2. Durula Nadate Bidisi – Agnaanada
Irulu Krutyavanalisi
Nirupamaguru Yesu Charanasharanu Hokku
Paramabhaagyagala Varava Dharisa Maadai
3. Shilubeyadige Nadisi – Divyaraktadi
Malinamanava Shuchisai
Kulaguru Yesuva Halavukaalavu Nambi
Balavaagi Sevisa Salahu Salahu Nitya
