Site icon Treasure Hymns – Kannada

ಸ್ತೋತ್ರ 90 O Parishuddaatmane – Shuchigai Baarai ಸಾಹಿತ್ಯ

ಸ್ತೋತ್ರ 90 O Parishuddaatmane – Shuchigai Baarai ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಓ ಪರಿಶುದ್ದಾತ್ಮನೇ – ಶುಚಿಗೈ ಬಾರೈ
ಪಾಪಿಯ ಸ್ವಾಂತವನ್ನೆ
ಪಾಪದಿಂದಲೆ ದೈವಕೋಪಕ್ಕೀಡಾದೆನು
ಶಾಪದಿಂದ ತಪ್ಪಿಸಿ ಕಾಪಾಡುತೆನ್ನನು

1. ಮಂದಮತಿಯ ಝಾಡಿಸೈ – ದೇವಾತ್ಮನೇ
ಅಂಧಕಾರವ ಹರಿಸೈ
ತಂದೆಯ ಬೆಳಕಿನಾನಂದವ ವರವನ್ನು
ಕುಂದದಂತೆಂದಿಗೂ ಹೊಂದಿಕೊಳ್ಳುವಂತೆ

2. ಸುರಿಸು ಸ್ವಾಮಿಯ ಪ್ರೇಮವ – ದಿವ್ಯಾತ್ಮನೇ
ಬರಿಸು ಆಶೀರ್ವಾದವ
ಧರಣಿಭೋಗಗಳನ್ನು ಹರುಷದಿ ತೊಳೆಯುತ
ಗುರುವಿನ ಸೇವೆಯಂ ಚುರುಕಾಗಿ ನಡಿಸಲು

3. ಹೀನತನವ ನೀಗಿಸೈ – ಸದ್ವಾರ್ತೆಯ
ಜ್ಞಾನವನುರೆ ಬೋಧಿಸೈ
ದೀನನಾಗಿಯೆ ದೈವಧ್ಯಾನವನೆಸಗುತ
ನ್ಯೂನ್ಯವಿಲ್ಲದ ಬಹುಮಾನವ ಪಡೆಯಲು

4. ಉದ್ದಟತನ ಬಿಡಿಸೈ – ಸತ್ಯಾತ್ಮನೇ
ಶುದ್ದನಾಗಲುದ್ದರಿಸೈ
ಬುದ್ದಿಹೀನರೊಳು ನಾನುದ್ದಾಮನಾದೆನು
ತಿದ್ದುತೆನ್ನನು ನಿತ್ಯ ಬದ್ದವರಗಳಿತ್ತು

5. ಬೇಡಿಕೊಳ್ಳಲು ಭಕ್ತಿಯಿಂ – ಪುಣ್ಯಾತ್ಮನೇ
ನೀಡು ಕೃಪೆಯ ದಯೆಯಿಂ
ಕಾಡುತ್ತಿರುವ ಎಲ್ಲಾ ಕೇಡುಬಂಧಗಳನ್ನು
ಈಡಾಡಿ ಎನ್ನನು ಕೂಡಿಸು ಸುಖದಲ್ಲಿ

 

 

O Parishuddaatmane – Shuchigai Baarai
Paapiya Swaantavanne
Paapadindale Daivakopakkeedaadenu
Shaapadinda Tappisi Kaapaadutennanu

1. Mandamatiya Jhaadisai – Devaatmane
Andhakaarava Harisai
Tandeya Belakinaanandava Varavannu
Kundadantendigoo Hondikolluvante

2. Surisu Swaamiya Premava – Divyaatmane
Barisu Aasheervaadava
Dharanibhogagalannu Harushadi Toleyuta
Guruvina Seveyam Churukaagi Nadisalu

3. Heenatanava Neegisai – Sadvaarteya
Gnaanavanure Bodhisai
Deenanaagiye Daivadhyaanavanesaguta
Nyoonyavillada Bahumaanava Padeyalu

4. Uddatatana Bidisai – Satyaatmane
Shuddanaagaluddarisai
Buddiheenarolu Naanuddamanaadenu
Tiddutennanu Nitya Baddavaragalittu

5. Bedikollalu Bhaktiyim – Punyaatmane
Needu Krupeya Dayeyim
Kaaduttiruva Ellaa Kedubandhagalannu
Eedaadi Ennanu Koodisu Sukhadalli

Exit mobile version