ಸ್ತೋತ್ರ 89 Devara Aatmane Nee – Emma Bhaavava ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇವರ ಆತ್ಮನೇ ನೀ – ಎಮ್ಮ ಭಾವವ ಶುದ್ದಿಸು ನೀ
ಪಾವನ ಚಿತ್ತದಿಂ ಜೀವಿಸ ಮಾಡಿಸು
ಓ ವರದಾಯಕನೇ
1. ಜ್ಞಾನದ ಸುಂದರನೇ ನಿಜಸ್ನಾನವ ಕೊಡುವವನೇ
ಜ್ಞಾನದ ಬೆಳಕನು ದೀನರ ಮನದೊಳು
ದಾನವ ಮಾಡಿಸು ನೀ
2. ತಂದೆಯ ಪ್ರೇಮವನೇ ದಯದಿಂದ ಸುರಿಸುವವನೇ
ಇಂದವಗುಣವನೆಮ್ಮಿಂದ ಪೊರಮಡಿಸಿ
ಬಂದೆಮ್ಮ ದೀವಿಸ ಬಾ
3. ಮಳೆಯಂತೆಯೇ ತೋರಿ ನೀನಿಳೆಯೊಳು ಕೃಪೆ ಸಾರಿ
ಸುಲಲಿತ ಫಲಗಳು ಮೊಳೆಯುವ ತೆರದಿ ನ
ಮ್ಮೊಳು ವರ ಪಾಲಿಸು ನೀ
4. ದೇವರ ಆತ್ಮನೇ ಬಾ ಹೊಸ ಜೀವವ ಪಾಲಿಸ ಬಾ
ತೀವಿದ ಕೃಪೆಯಿಂ ದೇವರ ಭಾವವ
ನಾವು ಪಡೆಯ ಮಾಡೈ
5. ಸ್ಥಿರಮನ ಕೊಡು ನಮಗೆ ಈ ಧರಣಿಯ ಪಥದೊಳಗೆ
ಕರುಣಿಸಿ ನಡಿಸುತ ಪರಮರಾಜ್ಯದಿ
ಹರುಷದೊಳ್ ಸೇರಿಸ ಬಾ
Devara Aatmane Nee – Emma Bhaavava Shuddisu nee
Paavana Chittadim Jeevisa Maadisu
O Varadaayakane
1. Gnaanada Sundarane Nijasnaanava Koduvavane
Gnaanada Belakanu Deenara Manadolu
Daanava Maadisu Nee
2. Tandeya Premavane Dayadinda Surisuvavane
Indavagunavanemminda Poramadisi
Bandemma Deevisa Baa
3. Maleyanteye Tori Neenileyolu Krupe Saari
Sulalita Phalagalu Moleyuva Teradi Na
Mmolu Vara Paalisu Nee
4. Devara Aatmane Baa Hosa Jeevava Paalisa Baa
Teevida Krupeyim Devara Bhaavava
Naavu Padeya Maadai
5. Sthiramana Kodu Namage Ee Dharaniya Pathadolage
Karunisi Nadisuta Paramaraajyadi
Harushadol Serisa Baa