ಸ್ತೋತ್ರ 88 Parishuddaatmane Bega Baarai ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪರಿಶುದ್ದಾತ್ಮನೇ ಬೇಗ ಬಾರೈ
ವರ ತಾರೈ ಕೃಪೆ ತೋರೈ
1. ಶಕ್ತಸತ್ಯಾತ್ಮನೇ ನಿತ್ಯವೂ ಕಾದೆನ್ನ
ಭಕ್ತಿಯ ಸಾಧಿಸ ಮಾಡೈ ನಿಜ
ಮುಕ್ತಿಯ ಮಾರ್ಗವ ತೋರೈ ನಿನ್ನ
ಶಕ್ತಿಯ ವರಗಳ ನೀಡೈ ಎನ್ನ ನೋಡೈ ನೋಡೈ
2. ಪಾಪದಿಂದ ಕೆಟ್ಟು ಕೋಪಕ್ಕೊಳಗಾಗಿ
ಶಾಪದ ಮಗನಾದೆನಯ್ಯ ಮನ
ಸ್ತಾಪದಿಂದ ಬಂದೆನೈಯ್ಯಾ ನಿನ್ನ
ದೀಪವ ನಿನ್ನಲ್ಲಿಡಯ್ಯಾ ಶುದ್ದ ಅಯ್ಯಾ ಅಯ್ಯಾ
3. ಮಂದದುರ್ಮತಿಯಿಂದ ದುಂದುಮಗನ ಹಾಗೆ
ತಂದೆಯಾಜ್ಞೆಯನ್ನು ಮೀರಿ ಈ
ಕಂದನಲೆದೆ ಕಡೆಸಾರಿ ಅಯ್ಯೋ
ನೊಂದುಹೋದೆನು ಬಹುಸಾರಿ ಲೋಕ ಸೇರಿ ಸೇರಿ
4. ದುಷ್ಟಪಿಶಾಚನ ಇಷ್ಟವ ಪೂರೈಸಿ
ನಷ್ಟಕೊಳಗಾಯ್ತೆನ್ನಾತ್ಮ ನನ್ನ
ಕಷ್ಟವ ಬಿಡಿಸು ಶುದ್ದಾತ್ಮಾ ಪಾಪ
ನಷ್ಟವ ಹರಿಸು ಸತ್ಯಾತ್ಮಾ ಪರಮಾತ್ಮಾ ಆತ್ಮಾ
5. ಲೋಕಭೋಗವ ನಂಬಿ ಏಕದೇವರ ಬಿಟ್ಟು
ನಾಕಮಾರ್ಗಕೆ ದೂರವಾದೆ ಮನ
ಶೋಕದಿಂದ ದೀನನಾದೆ ಅಯ್ಯೋ
ಸಾಕು ನನಗೀಗ ವೇಧೆ ಮನೋಬಾಧೆ ಬಾಧೆ
6. ಧರಣಿಯೊಳು ಪಾಪ ನರರಲ್ಲಿ ಹೆಚ್ಚಿತು
ಪರದಿಂದ ಪಾಲಿಸು ವರವ ನಿನ್ನ
ಕಿರಣದಿಂದ ನೀಡು ಜೀವ ಅಯ್ಯೋ
ಚರಣವ ನಂಬಿದೆ ದೇವಾ ಪರದೇವಾ ದೇವಾ
7. ಕರುಣೆಯುಳ್ಳ ಯೇಸು ಅರುಣವಾಕ್ಯವನ್ನು
ದರೆಯೊಳು ಹಬ್ಬಿಸು ಪೂರಾ ಯೇಸು
ಮರಣವ ತಿಳಿಸಯ್ಯಾ ತೀರಾ ನನ್ನ
ಮೊರೆಯನ್ನು ಕೇಳೈಯುದ್ದಾರಾ ಮಹಾಶೂರಾ ವೀರಾ
Parishuddaatmane Bega Baarai
Vara Taarai Krupe Torai
1. shaktasatyaatmane Nityavu Kaadenna
Bhaktiya Saadisa Maadai Nija
Muktiya Maargava Torai Ninna
Shaktiya Varagala Needai Enna Nodai Nodai
2. Paapadinda Kettu Kopakkolagaagi
Shaapada Maganaadenayya Mana
Staapadinda Bandenaiyyaa Ninna
Deepava Ninnallidayyaa Shudda Ayyaa Ayyaa
3. Mandadurmatiyinda Dundumagana Haage
Tandeyaagneyannu Meeri Ee
Kandanalede Kadesaari Ayyo
Nonduhodenu Bahusaari Loka Seri Seri
4. Dushtapishaachana Ishtava Pooraisi
Nashtakolagaaytennaatma Nanna
Kashtava Bidisu Shuddaatmaa Paapa
Nashtava Harisu Satyaatmaa Paramaatmaa Aatmaa
5. Lokabhogava Nambi Ekadevara Bittu
Naakamaargake Dooravaade Mana
Shokadinda Deenanaade Ayyo
Saaku Nanageega Vedhe Manobaadhe Baadhe
6. Dharaniyolu Paapa Nararalli Hechhitu
Paradinda Paalisu Varava Ninna
Kiranadinda Needu Jeeva Ayyo
Charanava Nambide Devaa Paradevaa Devaa
7. Karuneyulla Yesu Arunavaakyavannu
Dareyolu Habbisu Pooraa Yesu
Maranava Tilisayyaa Teeraa Nanna
Moreyannu Kelaiyuddaaraa Mahaashooraa Veeraa
