Site icon Treasure Hymns – Kannada

ಸ್ತೋತ್ರ 85 Meghaaroodhanaagi Hoda Yesu Kristanu ಸಾಹಿತ್ಯ

ಸ್ತೋತ್ರ 85 Meghaaroodhanaagi Hoda Yesu Kristanu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಮೇಘಾರೂಢನಾಗಿ ಹೋದ ಯೇಸು ಕ್ರಿಸ್ತನು – ತಿರುಗಿ
ಮೆಘಾರೂಢನಾಗಿ ಲೋಕಕ್ಕಿಳಿದು ಬರುವನು

1. ದೂತಸೈನ್ಯ ಸಹಿತವಾಗಿ ಪ್ರಭುವು ಬರುವನು – ಮಹಾ
ನೀತಿನ್ಯಾಯದಿಂದಲವನು ತೀರ್ಪುಕೊಡುವನು

2. ಕೊಳಲು ಶಬ್ದದಿಂದ ದೂತರೆರಗಿ ಬರುವರು – ದ್ವನಿಯ
ತಿಳಿದು ಸತ್ತಜನರೆಲ್ಲರೆದ್ದು ನಿಲ್ವರು

3. ನಿಂತುಕೊಂಡ ಜನರನೆಲ್ಲ ದಿವ್ಯದೂತರು – ಕುರುಬ
ರಂತೆ ಹೊರಟು ಭಾಗವಾಗಿ ವಿಂಗಡಿಸುವರು

4. ಸುಜನಕೋಟಿಸಮೂಹ ಸ್ವಾಮಿ ಬಲಕೆ ನಿಲ್ವದು – ಇತರ
ಕುಜನಕೋಟಿಸಮೂಹವಾತನೆಡಕೆ ನಿಲ್ವದು

5. ಬಲಕೆ ನಿಂತ ಭಕ್ತರೆಲ್ಲ ಸಂಭ್ರಮಿಸುವರು
ಬಲವ ಸ್ವರ್ಗದಲ್ಲಿ ನಿಂತ್ಯ ಕಂಡು ಬಾಳ್ವರು

6. ಎಡಕೆ ನಿಂತ ದುಷ್ಟರೆಲ್ಲಾ ದುಃಖಗೊಳ್ವರು – ಯೇಸು
ಪಡೆಯ ಬಿಟ್ಟು ಶಾಂತಿ ಹೊಂದಲಾರದಿರುವರು

7. ಬುದ್ದಿಯುಳ್ಳ ಜನರೇ ನೀವು ತಿಳಿದುಕೊಳ್ಳಿರಿ – ಬೇಗ
ಸಿದ್ದವಾಗಿ ಇಂದೆ ಯೇಸುವನ್ನು ನಂಬಿರಿ

 

 

Meghaaroodhanaagi Hoda Yesu Kristanu – Tirugi
Meghaaroodhanaagi Lokakkilidu Baruvanu

1. Dootasainyasahitavaagi Prabhuvu Baruvanu – Mahaa
Neetinyaayadindalavanu Teerpukoduvanu

2. Kolalu Shabdadinda Dootareagi Baruvaru – Dwaniya
Tilidu Sattajanarellareddu Nilvaru

3. Nintukonda Janaranella Divyadootaru – Kuruba
Rante Horatu Bhaagavaagi Vingadisuvaru

4. Sujanakotisamooha Swaami Balake Nilvadu – Itara
Kujanakotisamoohavaatanedake Nilvadu

5. Balake Ninta Bhaktarella Sambhramisuvaru
Balava Swargadalli Nintya Kandu Baalvaru

6. Edake Ninta Dushtarellaa Dukhagolvaru – Yesu
Padeya Bittu Shaanti Hondalaaradiruvaru

7. Buddiyulla Janare Neevu Tilidukolliri – Bega
Siddavaagi Inde Yesuvannu Nambiri

Exit mobile version