ಸ್ತೋತ್ರ 82 Manujakulave Nimma Arasanannu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮನುಜಕುಲವೇ ನಿಮ್ಮ ಅರಸನನ್ನು ಭಜಿಪುದು
ಘನಮಹಿಮಾವೃತನ ಕಡೆಗೆ ಮನವನೀವುದು
1. ಪ್ರೇಮಸತ್ಯಮೂರ್ತಿ ಯೇಸು ಭೂಮಿಯಾಳ್ವನು
ಸ್ವಾಮಿ ಅಘವ ಹರಿಸಿ ಸ್ವರ್ಗಾರೂಢನಾದನು
2. ನಿಲ್ಲುತೇಸು ರಾಜ್ಯ ಸತತ ಗೆಲ್ವುದು ಭುವಿಯ
ಸಲ್ಲಿಪುದು ಸನ್ಮಾನವಾತಗೆ ಶತ್ರುಮರಣವು
3. ಇರುವ ಶತ್ರುಗಣವು ಕ್ರಿಸ್ತಗೆರಗಿ ನಮಿಪುದು
ಶಿರವ ಬಾಗಿ ವಿಭುವಿನಾಜ್ಞೆ ವಹಿಸಿ ನಡೆವುದು
4. ಹರುಷಿಸು ನೀ ಕ್ರಿಸ್ತ ಸಭೆಯೇ ಪರಮರಾಜನು
ಧರೆಯ ನ್ಯಾಯಾಧೀಶನಾಗಿ ತಿರುಗಿ ಬರುವನು
5. ಪರಮದೂತಸ್ವರವು ಕೇಳಬರುವಾಗಲೇ
ಹರುಷಿಸಿರೈ ಎಂಬ ವಾರ್ತೆ ನಿರುತಾನಂದವೇ
Manujakulave Nimma Arasanannu Bhajipudu
Ghanamahimaavrutana Kadege Manavaneevudu
1. Premasatyamoorti Yesu Bhoomiyaalvanu
Swaami Aghava Harisi Swargaaroodhanaadanu
2. Nillu Tesu Raajya Satata Gelvudu Bhuviya
Sallipudu Sanmaanavaatage Shatrumaranavu
3. Iruva Shatruganavu Kristageragi Namipudu
Shirava Baagi Vibhuvinaagne Vahisi Nadevudu
4. Harushisu Nee Krista Sabheye Paramaraajanu
Dhareya Nyaayaadheeshanaagi Tirugi Baruvanu
5. Paramadootaswaravu Kelabaruvaagale
Harushisirai Emba Vaarte Nirutaanandave
