ಸ್ತೋತ್ರ 77 Jayaprada Yesuvina Uttaanavu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಜಯಪ್ರದ ಯೇಸುವಿನ ಉತ್ಥಾನವು
ಭಯಹರಿಸಿತು ಭುವಿಯೊಳ್
ಜಯಜಯವೆನ್ನುತ – ಜಯರಾಜ ಕ್ರಿಸ್ತಗೆ
ಜಯರಾಗವೆತ್ತಿ ವಿ – ಜಯವೆಂದು ಪಾಡಿರಿ
1. ನಿತ್ಯವಾದುದು ಜಗದೊ – ಳೀ ಜಯವು
ಸ್ತುತ್ಯಪೂರಿತವಾದುದು
ಸತ್ಯಸಾಕ್ಷಿಗಳೀ – ವಿಸ್ತಾರವಾರ್ತೆಯ
ಅತ್ಯಭಿಮಾನದೆ – ಬಿತ್ತಿದರ್ಜನಕೆಲ್ಲ
2. ಸಂದಿಪನು ಎಮ್ಮನು – ಜಯವನಾತ
ವಂದಿತ ಪ್ರಭುವರನು
ನಂದಿಸುವನು ಭಯ – ಶಂಕೆ ದುಗುಡಗಳ
ನೊಂದ ಮನದಿಂದ – ಬಂಧಹರನೇಸು
3. ಸರ್ವಸಭಾಮಂಡಲಿ – ಯೊಡೆಯನು
ಸರ್ವದಾ ಜೀವಿಪನು
ಸರ್ವತ್ರ ಭಜಿಸಿರಿ – ನಿರ್ಮಲಮೂರ್ತಿಯ
ಗರ್ವಿತ ಮರಣವ – ಹರಿಸಿಬಿಟ್ಟನು ಶೂರ
4. ಬಂಧುವೇ ನಿನ್ನರಿತ – ನಮ್ಮೊಳಗೆ
ಸಂದೇಹವಳಿದುದೀಗ
ಎಂದುಳಿಯದು ಜೀವ – ತಂದೆ ನೀನಿಲ್ಲದೆ
ಬಂದು ನೆರವಾಗೆಮ್ಮ – ತೊಂದರೆಗಳೊಳೆಂದೂ
5. ವರಜಯಶಾಲಿಗಳ – ನ್ನಾಗಿಸು ನಿನ್ನ
ನಿರುತದ ಪ್ರೇಮದಿಂದ
ಮರಣವದಿಲ್ಲದ – ಪರಮನಿವಾಸದಿ
ಗುರುವೆನ್ನ ಸೇರಿಸಿ – ಫೊರೆಯೈ ದಯಾಕರಾ
Jayaprada Yesuvina Uttaanavu
Bhayaharisitu Bhuviyol
Jayajayavennuta – Jayaraaja Kristage
Jayaraagavetti Vi – Jayavendu Paadiri
1. Nityavaadudu Jagado – Lee Jayavu
Stutyapooritavaadudu
Satyasaakshigalee – Vistaaravaarteya
Atyabhimaanade – Bittidarjanakella
2. Sandipanu Emmanu – Jayavanaata
Vandita Prabhuvaranu
Nandisuvanu Bhaya – Shanke Dugudagala
Nonda Manadinda – Bandhaharanesu
3. Sarvasabhaamandali – Yodeyanu
Sarvadaa Jeevipanu
Sarvatra Bhajisiri – Nirmalamoortiya
Garvita Maranava – Harisibittanu Shoora
4. Bandhuve Ninnarita – Nammolage
Sandehavalidudeega
Enduliyadu Jeeva – Tande Neenillade
Bandu Neravaagemma – Tondaregalolendoo
5. Varajayashaaligala – Nnaagisu Ninna
Nirutada Premadinda
Maranavadillada – Paramanivaasadi
Guruvenna Serisi – Poreyai Dayaakaraa
