Site icon Treasure Hymns – Kannada

ಸ್ತೋತ್ರ 72 Yesu Dayaasheela – Sadgunamoola ಸಾಹಿತ್ಯ

ಸ್ತೋತ್ರ 72 Yesu Dayaasheela – Sadgunamoola ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಯೇಸು ದಯಾಶೀಲ – ಸದ್ಗುಣಮೂಲ
ದೋಷಾರಿಪರಿಹಾರಾ – ಭಕ್ತಪರಿಪಾಲಾ

1. ಪರಿಶುದ್ದವಾದ ನಿನ್ನ – ಕರಗಳಲಿ ಮೊಳೆಗಳು
ಇರಿದು ಹೋದವು – ಗುರುವೇ ಎನಗಾಗಿಯೇ
ಹರಸೆನ್ನ ಕರಗಳನಾ – ನಿರುವರೆಗಿಳೆಯೊಳು
ಸರಸದಿ ನಿನಗಾಗಿ – ದುಡಿಯುವಂತೆಯೇ

2. ಪರಿಶುದ್ದವಾದ ನಿನ್ನ – ಕಾಲೊಳು ಮೊಳೆಗಳು
ಇರಿದು ಹೋದವು – ಕರ್ತಾ ಎನಗಾಗಿಯೇ
ಹರಸೆನ್ನ ಕಾಲುಗಳ – ನಾ ನಿನ್ನನಿಳೆಯೊಳು
ನಿರುತ ಹಿಂಬಾಲಿಸಿ – ನಡೆಯುವಂತೆಯೇ

3. ಪರಿಶುದ್ದವಾದ ನಿನ್ನ – ಶಿರದಿ ಮುಳ್ಳಿನ ಮುಕುಟ
ಇರಿಸಿದರೈ ಪ್ರಭುವೇ – ಎನಗಾಗಿಯೇ
ಹರಸೆನ್ನ ಶಿರವನ್ನು – ಮರೆಯದೆ ನಾನೆಂದೂ
ಹರುಷದಿ ನಿನ್ನನ್ನು – ಧ್ಯಾನ ಮಾಡುವಂತೆಯೇ

4. ಪರಿಶುದ್ದವಾದ ನಿನ್ನ – ಹೃದಯದಿ ಭಲ್ಲೆಯು
ಇರಿದು ಹೋಯಿತು – ದೇವಾ ಎನಗಾಗಿಯೇ
ಹರಸೆನ್ನ ಹೃದಯವ – ನಿನಗಾಗಿಯೇ ನಾನು
ಪರಿಶುದ್ದ ಪ್ರೇಮದಿಂ – ಬಾಳುವಂತೆಯೇ

5. ಪರಿಶುದ್ದವಾದ ನಿನ್ನ – ಪ್ರಾಣವ ನೀ ನೀಡಿ
ತೆರೆದೆ ಸ್ವರ್ಗದ ದ್ವಾರ – ಎನಗಾಗಿಯೇ
ಮರೆಯದೆ ನಾ ನಿನ್ನ – ಚರಣಕೆ ಮುದ್ದಿಟ್ಟು
ಹರುಷದಿ ಸೇವಿಪೆ – ಎನ್ನಯ ಪ್ರಭುವೇ

 

 

Yesu Dayaasheela – Sadgunamoola
Doshaariparihaaraa – Bhaktaparipaalaa

1. Parishuddavaada Ninna – Karagalali Molegalu
Iridu Hodavu – Guruve Enagaagiye
Harasenna Karagalanaa – Niruvaregileyolu
Sarasadi Ninagaagi – Dudiyuvanteye

2. Parishuddavaada Ninna – Kaalolu Molegalu
Iridu Hodavu – Kartaa Enagaagiye
Harasenna Kaalugala – Naa Ninnanileyolu
Niruta Himbaalisi – Nadeyuvanteye

3. Parishuddavaada Ninna – Shiradi Mullina Mukuta
Irisidarai Prabhuve – Enagaagiye
Harasenna Shiravanu – Mareyade Naanendoo
Harushadi Ninnannu – Dhyaana Maduvanteye

4. Parishuddavaada Ninna – Hrudayadi Bhalleyu
Iridu Hoyitu – Devaa Enagaagiye
Harasenna Hrudayava – Ninagaagiye Naanu
Parishudda Premadim – Baaluvanteye

5. Parishuddavaada Ninna – Praanava Nee Needi
Terede Swargada Dwaara – Enagaagiye
Mareyade Naa Ninna – Charanake Muddittu
Harushadi Sevipe – Ennaya Prabhuve

Exit mobile version