Site icon Treasure Hymns – Kannada

ಸ್ತೋತ್ರ 71 Mareyada Shilubeyidu – Ahaa – Chodyam ಸಾಹಿತ್ಯ

ಸ್ತೋತ್ರ 71 Mareyada Shilubeyidu – Ahaa – Chodyam ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಮರೆಯದ ಶಿಲುಬೆಯಿದು – ಆಹಾ – ಚೋದ್ಯಂ
ಕರುಣಾಕರನೆನ್ನ ಪಾಪವ ಹರಿಸಲು
ಮರಣವ ಪೊಂದಿದ ಪರಮಕ್ರುಪೆಯಿಂದಲೇ

1. ಪರಮಪಿತನು ತಾ ನರರ ವಿಮೋಚಿಸೆ
ಧರಣಿಗೆ ಕಳುಹಲು ವರಸುತ ಯೇಸುವಂ
ಸುರಿಸಿ ರುಧಿರವನು ಶರಣರ ಬ್ರುಂದವ
ಗುರುವರ ಪೊರೆಯಲು ಮರಣವ ಹೊಂದಿದ

2. ಕಲ್ಲೆದೆಯವರು ಮುಳ್ಳಿನ ಮುಡಿಯಂ
ನಿಲ್ಲಿಸೆ ತಲೆಯೊಳು ಚೆಲ್ಲಿತು ರುಧಿರವು
ಉಲ್ಲಾಸದಿಂದಲೆ ಪ್ರಾಣವನ್ನಿತ್ತು
ಎಲ್ಲರಂ ಪೊರೆದಿಹ ಪ್ರೇಮವಿದೇನು

3. ಪರಿಪರಿ ಬಾಧೆಯಂ ಕರುಣೆಯಿಂ ಸಹಿಸಿ
ಅರಿಗಳ ದ್ರೋಹಕ್ಕೆ ಮನ್ನಣೆಯ ಬೇಡಿ
ಧರಿಸಿದೆ ಶಾಂತಿಯಂ ವೇದನೆಯಲ್ಲಿ
ಶರಣರ ಹರಸಿದೆ ಈ ಪರಿಯಲ್ಲಿ

4. ಪಾಪವ ಹರಿಸುತ ತಾಪವ ಪಟ್ಟೆ
ಪಾಪಿಯನುಳಿಸಲು ಈ ಪರಿ ಸತ್ತೆ
ಭೂಪ ಯೇಸುವೇ ಕಾಪಡೈ ಎನ್ನಂ
ಶಾಪವ ಮಗನಾಗಿ ಎರಗಿಹೆ ಪಾದಕೆ

5. ದೇವನೇ ನಿನ್ನನು ಬೇಡುತಲಿರುವೆ
ಈವದು ಕೃಪೆಯಿಂದ ಜೀವವನೆನಗೆ
ಕಾವಳ ತುಂಬಿಹ ಭೂತಳವೆಲ್ಲವಂ
ದೀವಿಸು ನಿನ್ನಯ ಪ್ರೇಮಪ್ರಭಾವದಿಂ

 

 

Mareyada Shilubeyidu – Ahaa – Chodyam
Karunaakaranenna Paapava Harisalu
Maranava Pondida Paramakrupeyindale

1. Paramapitanu Taa Narara Vimochise
Dharanige Kaluhalu Varasuta Yesuvam
Surisi Rudhiravanu Sharanara Brundava
Guruvara Poreyalu Maranava Hondida

2. Kalledeyavaru Mullina Mudiyam
Nillise Taleyolu Chellitu Rudhiravu
Ullaasadindale Praanavannittu
Ellaram Porediha Premavidenu

3. Paripari Baadheyam Karuneyim Sahisi
Arigala Drohakke Mannaneya Bedi
Dhariside Shaantiyam Vedaneyalli
Sharanara Haraside Ee Pariyalli

4. Paapava Harisuta Taapava Patte
Paapiyanulisalu Ee Pari Satte
Bhoopa Yesuve Kaapadai Ennam
Shaapava Maganaagi Eragihe Paadake

5. Devane Ninnanu Bedutaliruve
Eevadu Krupeyinda Jeevavanenage
Kaavala Tumbiha Bhootalavellavam
Deevisu Ninnaya Premaprabhaavadim

Exit mobile version