ಸ್ತೋತ್ರ 66 Devaa Paripaalisi Nadisenna ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇವಾ ಪರಿಪಾಲಿಸಿ ನಡಿಸೆನ್ನ
ಯೇಸು ಶಿಲುಬೆಯ ಮರೆಯಲಿ
ದೇವಾ ಪರಿಪಾಲಿಸಿ ನಡಿಸೆನ್ನ ದೇವಾತ್ಮನ
ವರಗಳ ಕೊಟ್ಟೆನ್ನ
ಜೀವಾಕರ ಶಿಲುಬೆಯ ಫಲಗಳ
ನೀವಾಗಲೇ ಬರಿಸಿ ಕರುಣಿಸೆನ್ನ
1. ಆದಿಪಿತನಾದಮನಿಂ ಪುಟ್ಟಿ
ಲೋಕಪಾಶಕೆ ಸಿಕ್ಕಿಯೇ
ಸಾಧನೆಯ ಪಾಪಗಳನಿತುವ ಮಾಡಿ
ಮೇದಿನಿಯ ನರರನು ಸೇರಿಯೇ
ಶೋಧನೆಯ ಬಲೆಗೊಳಗಾಗಿಯೇ
ಬಾಧೆಪಡುತ್ತಾ ನಿನ್ನ ಕೂಗಿಯೇ
ಕಾದೆ ಶಿಲುಬೆಯಡಿಯಲ್ಲಿಯೇ
2. ನಿಲ್ಲಲು ನೆಲೆಯಾದಾಸರೆ ಕಾಣೆ
ಯೇಸು ಶಿಲುಬೆಯಿಲ್ಲದ ಮತ
ವೆಲ್ಲಾ ನರಕುಟಿಲ ಕಲ್ಪನೆಗಳು ತಾನೇ
ಕಲ್ಲಾದೆನ್ನ ಮನವನು ಕರಗಿಸಿ
ಸಲ್ಲಲಿತದ ಭಕ್ತಿಯ ಪುಟ್ಟಿಸಿ
ಒಳ್ಳೆ ಗುಣಫಲಗಳ ಸೃಷ್ಟಿಸಿ
ಸಲ್ಲಾಪದ ಪ್ರೀತಿಯ ನೆಟ್ಟಿಸಿ
3. ನೆಚ್ಚೆನು ಲೋಕದ ಸುಖವನ್ನೆಲ್ಲ
ಕಾಯ ಮಾಯವೆಂದರಿತು
ಇಚ್ಚೆ ನಿನ್ನೊಳಲ್ಲದೆ ಬೇರಿಲ್ಲ
ಅಚ್ಹ ಪುಣ್ಯ ಶಿಲುಬೆಯನ್ನು
ನಿಶ್ಚಯದಿಂದ ನಂಬಿದೆನಿನ್ನು
ಮೆಚ್ಚಿ ಯೇಸುವಿನ ಮುಖವನ್ನು
ತುಚ್ಚನಾದೆನ್ನನು ರಕ್ಷಿಸು
Devaa Paripaalisi Nadisenna
Yesu Shilubeya Mareyali
Devaa Paripaalisi Nadisenna Devaatmana
Varagala Kottenna
Jeevaakara Shilubeya Phalagala
Neevaagale Barisi Karunisenna
1. Aadipitanaadamanim Putti
Lokapaashake Sikkiye
Saadhaneya Paapagalanituva Maadi
Mediniya Nararanu Seriye
Shodhaneya Balegolagaagiye
Baadhepaduttaa Ninna Koogiye
Kaade Shilubeyadiyalliye
2. Nillalu Neleyaadaasare Kaane
Yesu Shilubeyillada Mata
Vellaa Narakutila Kalpanegalu Taane
Kallaadenna Manavanu Karagisi
Sallalitada Bhaktiya Puttisi
Olle Gunaphalagala Srushtisi
Sallaapada Preetiya Nettisi
3. Nechhenu Lokada Sukhavannella
Kaaya Maayavendaritu
Ichhe Ninnolallade Berilla
Achha Punya Shilubeyannu
Nishchayadinda Nambideninnu
Mechhi Yesuvina Mukhavannu
Tuchhanaadennanu Rakshisu
