Site icon Treasure Hymns – Kannada

ಸ್ತೋತ್ರ 54 Tandeguvaranindu Jagadolkandanaaduda Nodirai ಸಾಹಿತ್ಯ

ಸ್ತೋತ್ರ 54 Tandeguvaranindu Jagadolkandanaaduda Nodirai ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ತಂದೆಗುವರನಿಂದು ಜಗದೊದೊಳ್ಕಂದನಾದುದ ನೋಡಿರೈ
ಸುಂದರೇಶ ನುಡಿದ ರೀತಿ ಬಂದನೆಂದು ಪಾಡಿರೈ

1. ಮೋದಕರ್ತನು ಯೂದಕುಲ ದಾವೀದ ಪುರದಿ ಹುಟ್ಟಿದ
ಗೋದಲಿಯೊಳು ದಾದಿಯಿಲ್ಲದೆ ಸಾಧುವಾಗಿ ಮಲಗಿದ

2. ಪರಮಗುರುವು ಧರಣಿಗಿಳಿದು ಮರಿಯ ಕರದೊಳಾಡಿದ
ಕುರುಬರೆಡೆಗೆ ಸುರರಲೊರ್ವ ಭರದಿ ಸರಿದು ಪೇಳಿದ

3. ಒಡನೆ ಬಡವರೊಡೆಯನನ್ನು ಕಡು ತವಕದಿ ನೋಡಲು
ಸಡಗರದಲಿ ನಡೆದು ಸ್ವಾಮಿಯಡಿಯ ಕಂಡರಾಗಲು

4. ಕೊಟ್ಟಮಾತನು ಗಟ್ಟಿಮಾಡಲು ಕೊಟ್ಟಿಗೆಯೊಳು ಹುಟ್ಟಿದ
ಬಿಟ್ಟಜನರ ಕಟ್ಟ ಹರಿದು ಕೆಟ್ಟ ಶತ್ರುವನಟ್ಟಿದ

5. ತುಂಗದೇವರ ಸಂಘವೆಲ್ಲ ಮೃದಂಗವಾದ್ಯಗಳೊಂದಿಗೆ
ಮಂಗಳಂ ಜಯಮಂಗಳವೆಂದು ಹಿಂಗದೆ ಪಾಡಿರಿ ತಂದೆಗೆ

 

 

Tandeguvaranindu Jagadolkandanaaduda Nodirai
Sundresha Nudida Reeti Bandanendu Paadirai

1. Modakartanu Yoodakula Daaveeda Puradi Huttida
Godaliyolu Daadiyillade Saadhuvaagi Malagida

2. Paramaguruvu dharanigilidu Mariya Karadolaadida
Kurubaredege Suraralorva Bharadi Saridu Pelida

3. Odane Badavarodeyanannu Kadu Tavakadi Nodalu
Sadagaradali Nadedu Swaamiyadiya Kandaraagalu

4. Kottamaatanu Gattimaadalu Kottigeyolu Huttida
Bittajanara Katta Haridu Ketta Shatruvanattida

5. Tungadevara Sanghavella Mrudangavaadyagalondige
Mangalam Jayamangalavendu Hingade Paadiri Tandege

Exit mobile version