ಸ್ತೋತ್ರ 51 Vandisi Vandisi Vandisuva ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ವಂದಿಸಿ ವಂದಿಸಿ ವಂದಿಸುವ – ಕರುಣಾಳುಸ್ವಾಮಿಯ
ಚಂದದಿ ವಂದಿಸಿ ಸಂಧಿಸುವ
ಸುಂದರಲೋಕದಾನಂದವ ವರ್ಜಿಸಿ – ರೀ -ರೀ -ರೀ -ರೀ
ಬಂದು ಧರಣಿಯೊಳ್ಕಂದನಾದವನಂ
1. ದೇವರ ಆತ್ಮನ ಬಲದಿಂ – ಕನ್ನಿಕೆಯಲಿ ಹುಟ್ಟಿ
ಜೀವದ ವರಗಳನ್ನು ತಂದ
ಕಾವಳದೊಳಗಿಹ ದೇವರಿಸುವವರು – ರೀ -ರೀ -ರೀ -ರೀ
ದೀವಿಸುವಂಥ ಯೆಹೋವನ ತನಯನ
2. ಸೇವಿತ ನಾಯಕನವನಿಂದು – ಮೂಡಿದನೆಂದಾತನ
ಸೇವಕರ್ಪೇಳಿದರದನಂದು
ದಾವೀದ ಪುರದಿ ಪ್ರಭಾವನು ಜನಿಸಿದ – ರೀ -ರೀ -ರೀ -ರೀ
ಭಾವಿಸುತೆಲ್ಲರು ಪಾವನ ಚಿತ್ತದಿ
3. ಲೋಕದ ರಕ್ಷಕ ಫ್ರಭವಿಸಿದ – ನೆಂದರಿತರು ಪಂಡಿತ
ರಾಕಾಶದಿ ತಾರೆಯಿಂದ
ಕಾಕುಮಾನವರಿಗೆ ನಾಕವ ಪಾಲಿಪ – ರೀ -ರೀ -ರೀ -ರೀ
ಶ್ರೀಕರಪುಣ್ಯನನೇಕಶಬ್ದದಿಂದ
4. ಹೀನಮಾನವರ ಶಾಪವನು – ಅತಿ ಪ್ರೀತಿಯಿಂದಲಿ
ತಾನೇ ಹೊರಲನುಮತಿಸಿದನು
ದೀನರ ಮೇಲಣ ಹಾನಿಯ ತಪ್ಪಿಸೆ – ರೀ -ರೀ -ರೀ -ರೀ
ನ್ಯೂನವಿಲ್ಲದ ಘನಮಾನ ಬಿಟ್ಟವನಂ
5. ಆಡಿದ ಸದ್ವಾಕ್ಯವ ನೋಡಿ – ಬಹು ಪ್ರೇಮದ ಕರ್ತನು
ನೀಡಿದ ರಕ್ಷಣೆಯನು ಬೇಡಿ
ಓಡಿ ರಕ್ಷಕನ ಪಾಡುತ ನಿತ್ಯವೂ – ರೀ -ರೀ -ರೀ -ರೀ
ಮಾಡುತ ಸ್ಮರಣೆಯ ಕೂಡಿಕೊಂಡೆಲ್ಲರು
Vandisi Vandisi Vandisuva – Karunaaluswaamiya
Chandadi Vandisi Sandhisuva
Sundaralokadaanandava Varjisi – Ree -Ree-Ree -Ree
Bandu Dharaniyolkandanaadavanam
1. Devara Aatmana Baladim – Kannikeyali Hutti
Jeevada Varagalannu Tanda
Kaavaladolagiha Devarisuvavaru – Ree -Ree-Ree -Ree
Deevisuvantha Yehovana Tanayana
2. Sevita Naayakanavanindu – Moodidanendaatana
Sevakarpelidaradanandu
Daaveeda Puradi Prabhaavanu Janisida – Ree -Ree-Ree -Ree
Bhaavisutellaru Paavana Chittadi
3. Lokada Rakshaka Prabhavisida – Nendaritaru Pandita
Raakaashadi Taareyinda
Kaakumaanavarige Naakava Paalipa – Ree -Ree-Ree -Ree
Shreekarapunyananekashabdadinda
4. Heenamaanavara Shaapavanu – Ati Preetiyindali
Taane Horalanumatisidanu
Deenara Melana Haaniya Tappise – Ree -Ree-Ree -Ree
Nyoonavillada Ghanamaanabittavanam
5. Aadida Sadvaakyava Nodi – Bahu Premada Kartanu
Needida Rakshaneyanu Bedi
Odi Rakshakana Paaduta Nityavoo – Ree -Ree-Ree -Ree
Maaduta Smaraneya Koodikondellaru
