Site icon Treasure Hymns – Kannada

ಸ್ತೋತ್ರ 49 Banniri Mitrare Harshava Honduva ಸಾಹಿತ್ಯ

ಸ್ತೋತ್ರ 49 Banniri Mitrare Harshava Honduva ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಬನ್ನಿರಿ ಮಿತ್ರರೇ ಹರ್ಷವ ಹೊಂದುವ
ಉನ್ನತ ವರಕಾಗಿ – ಪರತರದುನ್ನತ ವರಕಾಗಿ
ಸನ್ನುತನಾತನು ಜನಿಸಿದ ಜಗದೊಳು
ಖಿನ್ನರ ಸಲುವಾಗಿ ಭುವಿಯೊಳು

1. ಅಂದದ ಲೋಕದ ತಂದೆಯ ಸುತನು
ಕುಂದದ ದಯೆಯಿಂದ – ಬರಹಗಳ ಹಿಂದಿನ ನುಡಿಯಿಂದ
ಸುಂದರಿ ಕನ್ಯಾಮರಿಯಳ ಗರ್ಭದಿ
ಕಂದನಾಗಿ ಬಂದ ಸುರನವಂದಿತ ಸುತನಾದ

2. ದೂತರ ಗಣಗಳು ರಾತ್ರಿ ಯೊಳಂಬರ
ಜ್ಯೋತಿಯೊಳ್ ಕುರುಬರಿಗೆ – ಶುಭಾವಾರ್ತೆ ಕೀರ್ತಿಸಿ ಪೇಳಿದರು – ವರ
ಖ್ಯಾತಿಯ ಬೆತ್ಲೆಹೇಮೆಂಬ ಪುರದಲ್ಲಿ
ನೀತಿಯ ರಕ್ಷಕನು – ಹುಟ್ಟಿಹನೆಂದು ಗೊತ್ತನು ಹೇಳಿದರು

3. ಪರಮಂಡಲದಲ್ಲಿ ದೇವಗೆ ಮಹಿಮೆಯು
ಧರಣಿಯೊಳ್ ಸಮಾಧಾನ -ಲೋಕದೊಳು ನರರಲಿ ದಯೆಪೂರ್ಣ -ಎಂದು
ಪರಮಗಣಗಳೆಲ್ಲಾ ಆಡುತ ಪಾಡುತ
ಪರಲೋಕಕೇರಿದರು ದೇವರು ತಂದ ವರವ ಕೊಂಡಾಡಿದರು

4. ಮೂಡಣಪಂಡಿರದ್ಬುತ ತಾರೆಯು
ಮೂಡಿದುದನು ಕಂಡು – ಆ ಮೂವರು ಗಾಢದಿ ಕೂಡಿಕೊಂಡು – ಬೇಗ
ಓಡಿಬಂದು ಅತಿಶಯವಹ ಕಂದನ
ನೋಡಿಯರ್ಪಿಸಿದರು – ಕಾಣಿಕೆಯ ಕೂಡಿಯೊಪ್ಪಿಸಿದರು

5. ಬಂದು ಯೇಸುವಿನ ಪಾದವ ಭಜಿಸಿ
ಚಂದದ ಮನದಿಂದ – ಅನಂತವಂದನನುತಿಯಿಂದ – ಇನ್ನು
ಮುಂದೆ ರಕ್ಷಕನ ಪಾದಕಮಲವನ್ನು
ಹೊಂದಿ ನಮಸ್ಕರಿಸಿ – ಆತನ ಪದವೊಂದೇ ನಮಸ್ಕರಿಸಿ

 

 

Banniri Mitrare Harshava Honduva
Unnata Varakaagi – Parataradunnata Varakaagi
Sannutanaatanu Janisida Jagadolu
Khinnara Saluvaagi Bhuviyolu

1. Andada Lokada Tandeya Sutanu
Kundada Dayeyinda – Barahagala Hindina Nudiyinda
Sundari Kanyaamariyala Garbhadi
Kandanaagi Banda Suranavandita Sutanaada

2. Dootara Ganagalu Raatriyolambara
Jyotiyol Kurubarige- Shubhaavaarte Keertisi Pelidaru – Vara
Khyaatiya Betlehememba Puradalli
Neetiya Rakshakanu- Huttihanendu Gottanu Helidaru

3. Paramandaladalli Devage Mahimeyu
Dharaniyol Samaadhaana-Lokadolu Nararali Dayepoorna-Endu
Paramaganagalellaa Aaduta Paaduta
Paralokakeridaru Devaru Tanda Varava Kondaadidaru

4. Moodanapandiradbuta Taareyu
Moodidudanu Kandu – Aa Moovaru Gaadhadi Koodikondu – Bega
Odibandu Atishayavaha Kandana
Nodiyarpisidaru – Kaanikeya Koodiyoppisidaru

5. Bandu Yesuvina Paadava Bhajisi
Chandada Manadinda – Anantavandananutiyinda – Innu
Munde Rakshakana Paadakamalavannu
Hondi Namaskarisi – Aatana Padavonde Namaskarisi

Exit mobile version