Site icon Treasure Hymns – Kannada

ಸ್ತೋತ್ರ 47 Dharaniya Janare Paadiri Koodi ಸಾಹಿತ್ಯ

ಸ್ತೋತ್ರ 47 Dharaniya Janare Paadiri Koodi ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಧರಣಿಯ ಜನರೇ ಪಾಡಿರಿ ಕೂಡಿ ಪರಸುತನಾಮವನು – ಆತ
ಪರವನು ಬಿಟ್ಟೀಲೋಕಕ್ಕೆ ಬಂದು ನರನಾಗುದಿಸಿದನು

1. ಆದಮನಿಂದ ಲೋಕಕೆ ಪ್ರಾಪ್ತವಾದ ಶ್ರಮೆಯು ಪೋಗ – ಲತಿ
ಮೋದವ ತಾಳುತ ರಕ್ಷಣೆ ಮಾಡಲು ಈ ದಿನ ಕಾಣಿಸಿದ

2. ಭೂಪರಲೋಕಗಳೈಕ್ಯವ ಮಾಡಿ ಶಾಪ ಹರಿಸುವಂತೆ – ಈಗ
ಪಾಪದ ರೂಪವನಾತನು ಎತ್ತುತ ಕೋಪಕೆ ಗುರಿಯಾದ

3. ಬಾನವರೀದಿನ ಕಾಣಿಸಿಕೊಂಡು ಮಾನವರಿಗೆ ಸಾರಿ – ಪರ
ಜ್ಞಾನದಿ ಗೀತವ ಹಾಡುತಲಾತನ ಮಾನವ ತಿಳಿಸಿದರು –

4. ಪರದೊಳು ಮಹಿಮೆಯ ಭುವಿಯೊಳು ದಿವ್ಯ ಕರುಣೆಯ ಸಾರಿದರು – ಅಂದು
ನರರೊಳು ಹರ್ಷವ ಹುಟ್ಟಿಸಿ ಅವರು ಪರಲೋಕಕ್ಕೇರಿದರು

5. ನೀತಿಯ ಸೂರ್ಯನು ಈ ದಿನ ಹುಟ್ಟಿ ಪ್ರೀತಿಯೆಮಗೆ ಸಾರಿ – ನಮ
ಗಾತನು ತನ್ನ ರೆಕ್ಕೆಯ ಕೆಳಗೆ ಭೀತಿಯ ನೀಗಿದನು

6. ನೂತನವಾಗಿಯೆ ಹುಟ್ಟಿದ ರಾಜನು ಸೈತಾನನ ಜಯಿಸಿ – ತನ್ನ
ಮಾತನು ಲೋಕದೊಳೆಲ್ಲರು ಕೇಳುವೊಲಾತನು ಮಾಡುವನು

7. ಬನ್ನಿರಿ ಈಗ ಆತನಿಗೆರಗಿ ತನ್ನಿರಿ ಘನಮಾನ – ಅವ
ನನ್ನು ವಿಶೇಷ ಪ್ರೀತಿಯ ಮಾಡುತ ಬನ್ನಿರಿ ಸೇವಿಸುವ

 

 

Dharaniya Janare Paadiri Koodi Parasutanaamavanu – Aata
Paravanu Bitteelokakke Bandu Naranaagudisidanu

1. Aadamaninda Lokake Praaptavaada Shrameyu Poga – Lati
Modava Taaluta Rakshane Maadalu Ee Dina Kaanisida

2. Bhooparalokagalikyava Maadi Shaapa Harisuvante – Eega
Paapada Roopavanaatanu Ettuta Kopake Guriyaada

3. Baanavareedina Kaanisikondu Maanavarige Saari – Para
Gnaanadi Geetava Haadutalaatana Maanava Tilisidaru –

4. Paradolu Mahimeya Bhuviyolu Divya Karuneya Saaridaru – Andu
Nararolu Harshava Huttisi Avaru Paralokakkeridaru

5. Neetiya Sooryanu Ee Dina Hutti Preetiyemage Saari – Nama
Gaatanu Tanna Rekkeya Kelage Bheetiya Neegidanu

6. Nootanavaagiye Huttida Raajanu Saitaanana Jayisi – Tanna
Maatanu Lokadolellaru Keluvolaatanu Maaduvanu

7. Banniri Eega Aatanigeragi Tanniri Ghanamaana – Ava
Nannu Vishesha Preetiya Maaduta Banniri Sevisuva

Exit mobile version