Site icon Treasure Hymns – Kannada

ಸ್ತೋತ್ರ 39 Ivane Olle Kurubanayya ಸಾಹಿತ್ಯ

ಸ್ತೋತ್ರ 39 Ivane Olle Kurubanayya ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಇವನೇ ಒಳ್ಳೆ ಕುರುಬನಯ್ಯ – ಯೇಸು
ಸುರವರಗಳೀವನು ಘನದಿ ನಿನಗೈಯ್ಯ

1. ಕಡೆಗಾಣದ ಅಡವಿಯಲ್ಲಿ – ಸೇರಿ
ಕಡು ಕಷ್ಟಗಳನ್ನೆಲ್ಲಾ ಪಡುತ್ತಿರುವಲ್ಲಿ
ತಡೆಯದೆ ಕೃಪೆಯ ಶಬ್ದದಲಿ – ಎನ್ನ
ನೊಡನೆ ಕರೆದ ಹೆಸರಿಟ್ಟು ಪ್ರೀತಿಯಲಿ

2. ಚದರಿಹೋದ ಕುರಿಯಾದ – ಒಳ್ಳೆ
ಮೃದುವಾದ ಮಧುರಶಬ್ದವನ್ನು ಆಲಿಸದ
ಹೃದಯದ ಮೂಢತ್ವ ಬಿಡದ – ಎನ್ನ
ಬೆದಕಿದ ದಯದಿ ಬೆನ್ನಟ್ಟಿ ಎಡೆಬಿಡದ

3. ದೂರವಾಗಿ ಹೋಗಿಬಿಟ್ಟ – ಕೃಪಾ
ಸಾರದ ಕಟ್ಟಳೆ ಮೀರುತ ಕೆಟ್ಟ
ಕ್ರೂರಮ್ರುಗದ ಬಾಧೆ ಪಟ್ಟ – ಇನ್ನು
ದ್ದಾರಮಾಡಲೈದು ಗಾಯವ – ಪಟ್ಟ

4. ಅಂದಚಂದದೊಳ್ಬಂದು ನಿಂದು – ತನ್ನ
ಕಂದನಂದದೊಳೆತ್ತಿ ಹಟ್ಟಿಗೈತಂದು
ಸುಂದರ ಪಸಲೆಯೊಳಿಂದು – ಎನ್ನ
ತಂದಿಟ್ಟು ಕುಡಿಸಿದ ಜೀವಜಲವೆಂದೂ

5. ಮಲಿನವಾದ ಎನ್ನ ಕಾಯ – ಮಹಾ
ಬಲದಿ ಬಾಧಿಪ ಮನಸಾಕ್ಷಿಯ ಗಾಯ
ಹಲವು ಸಂದೇಹನಿಕಾಯ – ತನ್ನ
ಬೆಲೆಯುಳ್ಳ ರಕ್ತದಿ ತೊಳೆದ ಗುರುರಾಯ

 

 

Ivane Olle Kurubanayya – Yesu
Survaragaleevanu Ghanadi Ninagaiyya

1. Kadegaanada Adaviyalli – Seri
Kadu Kashtagalannellaa Paduttiruvalli
Tadeyade Krupeya Shabdadali – Enna
Nodane Kareda Hesarittu Preetiyali

2. Chadarihoda Kuriyaada – Olle
Mruduvaada Madhurashabdavanu Aalisada
Hrudayada Moodhatva Bidada – Enna
Bedakida Dayadi Bennatti Edebidada

3. Dooravaagi Hogibitta – Krupaa
Saarada kattale Meeruta Ketta
Krooramrugada Baadhe Patta – Ennu
Ddaramaadalaidu Gaayava – Patta

4. Andachandadolbandu Nindu – Tanna
Kandanandadoletti Hattigaitandu
Sundarapasaleyolindu – Enna
Tandittu Kudisida Jeevajalavendoo

Exit mobile version