ಸ್ತೋತ್ರ 35 Karuni Rakshaka Yesunaathaa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಕರುಣಿ ರಕ್ಷಕ ಯೇಸುನಾಥಾ – ನಿನ್ನ
ಸ್ಮರಣೆ ಭಕ್ತಗತಿಮೋದ
ಶರಣಸತ್ಪುರುಶರು ನಿರುಪಮಹರುಷದಿ
ವರುಣಿಪರು ನಿನ್ನ ಘನಕೀರ್ತಿ ಪರದೊಳು
1. ಇದ್ದು ನಿನ್ನೆಡೆ ಸೇರಾಫಿಯರು – ದೇಹ
ಹೊದ್ದು ರೆಕ್ಕೆಗಳಿಂ ನಮಿಪರು
ಶುದ್ದ ಶುದ್ದ ಪರಿಶುದ್ದನೆಂದೆನ್ನುತ
ಎದ್ದು ಹಾರಾಡುತ ಪೊಗಳುತ್ತಲಿರುವರು
2. ಧರಣಿಭಕ್ತರು ಎಲ್ಲಾ ಕೂಡಿ – ನಿನ್ನ
ಸ್ಮರಣಸ್ಥಾನಕ್ಕೆ ಬಿಜಮಾಡಿ
ವರಣಿಸಲ್ಪಡುವ ಸುವೇದಭೋಧೆಯ ಕೇಳಿ
ಕರುಣೆಹೊಂದಿ ನಿನ್ನಾದರಣೆಯೊಳಿರುವರು
3. ಮಡದಿಮಕ್ಕಳ ಕೂಡ ಬಂದು – ತಮ್ಮ
ಬಡಭಕ್ತಿ ಕಾಣಿಕೆ ತಂದು
ಒಡೆಯಾ ರಕ್ಷಕಾ ಇಂದು ಪದವಿಪಾಲಿಸು ಎಂದು
ಅಡಿಗಳ ಭಜಿಪರು ಡ್ರುಡಭಕ್ತರೆಲ್ಲರು
4. ಅಂಗನೆಯರು ಸಂಗಾತಿಯರು – ಬಹು
ಶ್ರುಂಗಾರವುಳ್ಳ ಬಾಲೆಯರು
ಮಂಗಳಮಾನಿತ ತಂದೆ ಬಾರೆನ್ನುತ
ಸಂಗೀತ ಹಾಡಿ ನಿನ್ನಂಘ್ರಿಯ ಭಜಿಪರು
5. ಬರುವ ಲೋಕದ ಭಾಗ್ಯ ನೋಡಿ – ತಮ್ಮ
ಚರಹೃದಯವ ಸ್ಥಿರಮಾಡಿ
ಕರವ ಜೋಡಿಸಿ ಮೊಣಕಾಲೂರಿ ಭಯದೊಳು
ಶಿರವ ಭಾಗಿಸಿ ನಿನ್ನ ಚರಣವ ಭಜಿಪರು
Karuni Rakshaka Yesunaathaa – Ninna
Smarane Bhaktagatimoda
Sharanasatpurusharu Nirupamaharushadi
Varuniparu Ninna Ghanakeerti Paradolu
1. Iddu Ninnede Seraaphiyaru – Deha
Hoddu Rekkegalim Namiparu
Shudda Shudda Parishuddanendennuta
Eddu Haaraaduta Pogaluttaliruvaru
2. Dharanibhaktaru Ellaa Koodi – Ninna
Smaranasthaanakke Bijamaadi
Varanisalpaduva Suvedabhodheya Keli
Karunehondi Ninnaadaraneyoliruvaru
3. Madadimakkala Kooda Bandu – Tamma
Badabhakti Kaanike Tandu
Odeyaa Rakshakaa Indu Padavipaalisu Endu
Adigala Bhajiparu Drudhabhaktarellaru
4. Anganeyaru Sangaatiyaru – Bahu
Shrungaaravulla Baaleyaru
Mangalamaanita Tande Baarennuta
Sangeeta Haadi Ninnanghriya Bhajiparu
5. Baruva Lokada Bhaagya Nodi – Tamma
Charahrudayava Sthiramaadi
Karava Jodisi Monakaaloori Bhayadolu
Shirava Baagisi Ninna Charanava Bhajiparu