ಸ್ತೋತ್ರ 34 Priyane Satprabhu Yesuve ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪ್ರಿಯನೇ ಸತ್ಪ್ರಭು ಯೇಸುವೇ – ಭಕ್ತರ ಪ್ರೇಮಾ
ಶ್ರಯನಾದ ಗುರು ಯೇಸುವೇ
ಕ್ಷಯಲೋಕ ಸೌಭಾಗ್ಯ ವೀಯದೆಮಗೆ ತೃಪ್ತಿ
ಲಯವಿಲ್ಲದ ನಿನ್ನೊಳಿಹುದು ನಿತ್ಯವಿಮುಕ್ತಿ
1. ನಿನ್ನ ಸತ್ಯವು ನಿಲ್ವದು – ನಂಬುವ ಎಲ್ಲ
ರನ್ನು ರಕ್ಷಿಸಬಲ್ಲದು
ನಿನ್ನನ್ನು ಹುಡುಕುವ ಮನುಜರಿಗುಪಕಾರಿ
ನಿನ್ನ ಹೊಂದುವವರ ಸರ್ವಸ್ವವು ನೀನೇ
2. ಜೀವಾಧಾರವು ನೀನೆಮಗೆ – ನಿನ್ನನು ನಮ್ಮ
ಜೀವ ಪಡೆವದು ಕ್ಷೇಮವೆ
ಜೀವಪಾನವು ನೀನೇ ದಾಹವಳಿವುದೆಮಗೆ
ಈವದ್ಯೆ ನಿನ್ನ ಸಾನಿಧ್ಯ ಸಂತೃಪ್ತಿಯಂ
3. ಭುವನಲಂಪಟದಲ್ಲಿಯೂ – ನಾವಲೆದಾಡಿ
ಕವಿದ ಕಳವಳದಿಂದಲೂ
ದಿವಿಜರಕ್ಷಕಾ ನಿನ್ನನರಸಿ ನಿನ್ನಯ ಮುಖವ
ನವಲೋಕಿಸಲು ನಮ್ಮ ವೇದೆ ತೀರುವದಯ್ಯ
4. ಎಮ್ಮೊಂದಿಗಿರು ಕರ್ತನೇ – ನೀನೆಂದಿಗೂ
ನಮ್ಮ ಜೀವನದಲ್ಲಿಯೇ
ಎಮ್ಮೊಂದಿಗಿರಲು ನೀ ನಿರ್ಮಲರಾಪೆವು
ಸಮ್ಮುದವಿಹದೊಳೇ ಪಾಪವಳಿವದಯ್ಯಾ
Priyane Satprabhu Yesuve – Bhaktara Premaa
Shrayanaada Guru Yesuve
Kshayaloka Soubhaagyaveeyademage Trupti
Layavillada Ninnolihudu Nityavimukti
1. Ninna Satyavu Nilvadu – Nanbuva Ella
Rannu Rakshisaballadu
Ninnannu Hudukuva Manujarigupakaari
Ninna Honduvavara Sarvaswavu Neene
2. Jeevaadhaaravu Neenemage – Ninnanu Namma
Jeeva Padevadu Kshemave
Jeevapaanavu Neene Daahavalivudemage
Eevadye Ninna Saanidhya Santruptiyam
3. Bhuvanalampatadalliyoo – Naavaledaadi
Kavida Kalavaladindaloo
Divijarakshakaa Ninnanarasi Ninnaya Mukhava
Navalokisalu Namma Vede Teeruvadayya
4. Emmondigiru Kartane – Neenendigoo
Namma Jeevanadalliye
Emmondigiralu Nee Nirmalaraapevu
Sammudavihadole Paapavalivadayya