Site icon Treasure Hymns – Kannada

ಸ್ತೋತ್ರ 32 Guru Yesu Kristana Nodu ಸಾಹಿತ್ಯ

ಸ್ತೋತ್ರ 32 Guru Yesu Kristana Nodu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಗುರು ಯೇಸು ಕ್ರಿಸ್ತನ ನೋಡು – ನಂಬಿ ನೋಡು – ಕೃಪಾ
ಕರನಿಗೆರಗಿ ಪಾಪಕ್ಷಮೆಯನು ಬೇಡು

1. ಪರಮಸೃಷ್ಟೀಶನು ತಾನೇ – ಕರ್ತ ತಾನೇ – ನಿತ್ಯ
ಪರಿಪಾಲಿಸುವ ಮಹಾದೇವರು ತಾನೇ

2. ಧರೆಯಲ್ಲಿ ನರನಾಗಿ ಜನಿಸಿ ಕ್ಷೇಮವೆರಸಿ – ದಿವ್ಯ
ವರಗಳಂ ನೀಡಿದನೆಲ್ಲರ ಹರಸಿ

3. ದುರುಳರಕ್ಷಣೆಗಳವಟ್ಟ – ಗಾಯಪಟ್ಟ -ಘೋರ
ನರಕ ತಪ್ಪಿಸೆ ತನ್ನ ಪ್ರಾಣವ ಕೊಟ್ಟ

4. ಮರಣವಂ ಸೋಲಿಸೆದ್ದವನು – ಮೃತ್ಯುಂಜಯನು – ಭಯವ
ಹರಿಸಿ ಸನ್ಮಾರ್ಗವಂ ಸ್ಥಾಪಿಸಿದವನು

5. ಪರಮಸನ್ನಿಧಿಗೇರಿದವನು – ಸೇರಿದವನು – ಬೇಗ
ತಿರುಗಿ ಬಂದು ನ್ಯಾಯವನ್ನು ತೀರಿಸುವನು

6. ಕರುಣಾಬ್ಡಿಯಾದಂಥ ಗುರುವು – ಪ್ರಿಯ ಗುರುವು – ನಿಜದಿಂ
ದರಸಲು ಪೋಪುದು ಮೃತಿದೋಷದಿರವು

7. ಪರಿಶುದ್ದ ನಾಗಿರ್ಪ ಸ್ವಾಮಿ – ಪುಣ್ಯಕಾಮಿ – ಎಲ್ಲಾ
ದುರಿತವಂ ಕೆಡಿಪುದರಲ್ಲಿ ಸುಪ್ರೇಮಿ

8. ಚಿರಕಾಲ ಬಾಳುವ ಸ್ವಭುವು – ಸತ್ಯವಿಭುವು – ಆತ
ನಿರುತ ತುಸುವಾದರೂ ಕದಲದ ಪ್ರಭುವು

9. ನರರಲ್ಲಿ ಗುರುವಿಲ್ಲ ನಿನಗೆ – ಪಾಪಿಗಳಿಗೆ – ಇವನ
ಹೊರತು ರಕ್ಷಕರಿಲ್ಲವೆಲ್ಲಿಯೂ ಇಳೆಗೆ

10. ತ್ವರೆಯಾಗಿ ಪಿಡಿ ಗುರುಪದವ – ಹೊಂದು ಮುದವ – ಪೂರ್ಣ
ಹರುಷದಿಂದೀವನು ಮುಕ್ತಿ ಸಂಪದವ

11. ಸ್ಥಿರ ಸಮಾಧಾನವ ಕೊಡುವ – ಶಾಂತಿ ಕೊಡುವ – ಮುಂದೆ
ಪರಲೋಕದಾನಂದದೊಳು ಸ್ವೀಕರಿಸುವ

 

 

Guru Yesu Kristana Nodu – Nambi Nodu – Krupaa
Karanigeragi Paapakshameyanu Bedu

1. Paramasrushteeshanu Taane -Karta Taane – Nitya
Paripaalisuva Mahaadevaru Taane

2. Dhareyalli Naranaagi Janisi Kshemaverasi – Divya
Varagalam Needidanellara Harasi

3. Durularakshanegalavatta – Gaayapatta -Ghora
Naraka Tappise Tanna Praanava Kotta

4. Maranavam Soliseddavanu – Mrutyunjayanu – Bhayava
Harisi Sanmaargavam Sthaapisidavanu

5. Paramasannidhigeridavanu – Seridavanu – Bega
Tirugi Bandu Nyaayavanu Teerisuvanu

6. Karunaabdiyaadantha Guruvu – Priya Guruvu – Nijadim
Darasalu Popudu Mrutidoshadiravu

7. Parishudda Naagirpa Swaami – Punyakaami – Ellaa
Duritavam Kedipudaralli Supremi

8. Chirakaala Baaluva Swabhuvu – Satyavibhuvu – Aata
Niruta Tusuvaadaroo Kadalada Prabhuvu

9. Nararalli Guruvilla Ninage – Paapigalige – Ivana
Horatu Rakshakarillavelliyoo Ilege

10. Twareyaagi Pidi Gurupadava – Hondu Mudava – Poorna
Harushadindeevanu Mukti sampadava

11. Sthira Samaadhaanava Koduva – Shaanti Koduva – Munde
Paralokadaanandadolu Sweekarisuva

Exit mobile version