Site icon Treasure Hymns – Kannada

ಸ್ತೋತ್ರ 3 Jeevaswaroopanannu Paavana Swaamiyannu ಸಾಹಿತ್ಯ

ಸ್ತೋತ್ರ 3 Jeevaswaroopanannu Paavana Swaamiyannu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಜೀವಸ್ವರೂಪನನ್ನು ಪಾವನ ಸ್ವಾಮಿಯನ್ನು
ನಾವೀಗ ಕೊಂಡಾಡುವ ಯೆಹೋವನನ್ನು
ನಾವೀಗ ಕೊಂಡಾಡುವ ದಯಾಳುವನ್ನು
ನಾವೀಗ ಕೊಂಡಾಡುವ

1. ತರಳರಾದಂದಿನಿಂ ಮರೆಯದೆ ಕಾದಂತ
ಕರುಣೆಯ ಧ್ಯಾನಿಸುವ – ಆಶ್ಚರ್ಯವಾದ
ಕರುಣೆಯ ಧ್ಯಾನಿಸುವ – ವಿಸ್ತಾರವಾದ
ಕರುಣೆಯ ಧ್ಯಾನಿಸುವ – ದಿವ್ಯ

2. ಧರಣಿಯೊಳಗೆ ಎಮ್ಮ ಉರುಕಷ್ಟಗಳನ್ನೆಲ್ಲಾ
ಹರುಷದಿಂ ತೊಲಗಿಸಿದ – ಶೋಧನೆಗಳ
ಹರುಷದಿಂ ತೊಲಗಿಸಿದ – ವೇದನೆಗಳ
ಹರುಷದಿಂ ತೊಲಗಿಸಿದ – ದಿವ್ಯ

3. ಉರುಬೇಯುಲ್ಲವರಾಗಿ ಅರುಹಿದ ಕಾಲದೊಳ್
ತ್ವರೆಯಾಗಿ ಪಾಲಿಸಿದ – ಪರಿಣಾಮವನ್ನು
ತ್ವರೆಯಾಗಿ ಪಾಲಿಸಿದ – ಸುಶಾಂತಿಯನ್ನು
ತ್ವರೆಯಾಗಿ ಪಾಲಿಸಿದ – ದಿವ್ಯ

4. ಮರಣದ ಬಾಧೆಯ ಹರಿಸಿಬಿಟ್ಟಿರುವಂಥ
ನಿರುತನಂ ಸೇವಿಸುವ – ಸಂತೋಷವಾಗಿ
ನಿರುತನಂ ಸೇವಿಸುವ – ಪ್ರೀತ್ಯರ್ಥವಾಗಿ
ನಿರುತನಂ ಸೇವಿಸುವ – ದಿವ್ಯ

5. ದುರುಳರಾದವರನ್ನು ನರಕದಿಂ ಬಿಡಿಸಲು
ಪರಮಪುತ್ರನನಿಟ್ಟ – ರಕ್ಷಣೆಗಾಗಿ
ಪರಮಪುತ್ರನನಿಟ್ಟ – ಸಂಪೂರ್ಣವಾಗಿ
ಪರಮಪುತ್ರನನಿಟ್ಟ – ದಿವ್ಯ

6. ಪರಿಶುದ್ದ ದೇಶದೊಳ್ ಸ್ತಿರ ಭಾಗ್ಯವೀವನ
ಸ್ಮರಣೆಯ ಮಾಡುತಿರುವ – ಸಾನಂದದಿಂದ
ಸ್ಮರಣೆಯ ಮಾಡುತಿರುವ – ಅತ್ಯಾಷೆಯಿಂದ
ಸ್ಮರಣೆಯ ಮಾಡುತಿರುವ – ದಿವ್ಯ

7. ವರಗಳ ಮೂಲನಾದ ಗುರುವಿನ ಚರಣಕ್ಕೆ
ಎರಗುವ ಸ್ತೋತ್ರಿಸುತ – ಅನತರಾಗಿ
ಎರಗುವ ಸ್ತೋತ್ರಿಸುತ – ಸಾಷ್ಟಾಂಗವಾಗಿ
ಎರಗುವ ಸ್ತೋತ್ರಿಸುತ – ದಿವ್ಯ

 

 

Jeevaswaroopanannu Paavana Swaamiyannu
Naaveega Kondaaduva Yehovanannu
Naaveega Kondaaduva Dayaaluvannu
Naaveega Kondaaduva

1. Taralaraadandinim Mareyade Kaadantha
Karuneya Dhyaanisuva – Aashcharyavaada
Karuneya Dhyaanisuva – Vistaaravaada
Karuneya Dhyaanisuva – Divya

2. Dharaniyolage Emma Urukashtagalannellaa
Harushadim Tolagisida – Shodhanegala
Harushadim Tolagisida – Vedanegala
Harushadim Tolagisida – Divya

3. Urubeyullavaraagi Aruhida Kaaladol
Twareyaagi Paalisida – Parinaamavannu
Twareyaagi Paalisida – Sushaantiyannu
Twareyaagi Paalisida – Divya

4. Maranada Baadheya Harisibittiruvantha
Nirutanam Sevisuva – Santoshavaagi
Nirutanam Sevisuva – Preetyarthavaagi
Nirutanam Sevisuva – Divya

5. Durularaadavarannu Narakadim Bidisalu
Paramaputrananitta – Rakshanegaagi
Paramaputrananitta – Sampoornavaagi
Paramaputrananitta – Divya

6. Parishudda Deshadol Stira Bhaagyaveevana
Smaraneya Maadutiruva – Saanandadinda
Smaraneya Maadutiruva – Atyaasheyinda
Smaraneya Maadutiruva – Divya

7. Varagala Moolanaada Guruvina Charanakke
Eraguva Stotrisuta – Anataraagi
Eraguva Stotrisuta – Saashtaangavaagi
Eraguva Stotrisuta – Divya

Exit mobile version