Site icon Treasure Hymns – Kannada

ಸ್ತೋತ್ರ 231 Mangala Nijamangala Shubhamangala Pitage ಸಾಹಿತ್ಯ

ಸ್ತೋತ್ರ 231 Mangala Nijamangala Shubhamangala Pitage ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಮಂಗಳ ನಿಜಮಂಗಳ ಶುಭಮಂಗಳ ಪಿತಗೆ – ಜಯ
ಮಂಗಳ ಸುತಗೆ

1. ಮಾತಿನಿಂದ ಸಕಲವಂ ಪ್ರಣೀತಗೈದಗೆ – ಅತಿ
ಶಾತದಿಂದ ಕೂಡಿಕೊಂಡ ನೀತಿಯಾಣ್ಮಗೆ
ಗೀತಹಾಡುವಾತಗೆ

2. ಅನುಪಮಪ್ರಭಾವನಾದ ಘನತರಾತ್ಮಗೆ – ಬಹು
ವಿನಯದಿಂದ ಮಾಳ್ಪ ನಾವು ಮನವಿಯಾತಾಗೆ
ಘನಮಾನಪಾತ್ರಗೆ

3. ಸರ್ವಮಹಿಮೆಯನ್ನು ಹೊಂದುವೊರ್ವ ಪೂಜ್ಯಗೆ – ಈ
ಉರ್ವಿಯಲ್ಲಿ ಸ್ತೋತ್ರವನ್ನು ಪೊಂದುವಾತಗೆ
ಸರ್ವಶಕ್ತದೇವಗೆ

4. ಪ್ರೀತಿಯಿಂದ ರಕ್ಷಿಸುವ ಪುನೀತ ಸ್ವಾಮಿಗೆ – ನಿರ್
ಭೀತರಾಗಿ ಬಿನ್ನಹ ಮಾಳ್ಪೆವಾತನೊಲುಮೆಗೆ
ಖ್ಯಾತಿಯುಳ್ಳ ಕರ್ತಗೆ

5. ಪರಮಭಾಗ್ಯವನ್ನು ಕೊಡುವ ಅರಸರರಸಗೆ
ಕರವ ಮುಗಿದು ಬಾಗಿಸೋಣ ಶಿರಗಳಾತಗೆ
ಪರಿಪೂರ್ಣಕಾಂತಗೆ

 

 

Mangala Nijamangala Shubhamangala Pitage – Jaya
Mangala Sutage

1. Maatininda Sakalavam Praneetagaidage – Ati
Shaatadinda Koodikonda Neetiyaanmage
Geetahaaduvaatage

2. Anupamaprabhaavanaada Ghanataraatmage – Bahu
Vinayadinda Maalpa Naavu Manaviyaatage
Ghanamaanapaatrage

3. Sarvamahimeyannu Honduvorva Poojyage – Ee
Urviyalli Stotravannu Ponduvaatage
Sarvashaktadevage

4. Preetiyinda Rakshisuva Puneeta Swaamige – Nir
Bheetaraagi Binnaha Maalpevaata nolumege
Khyaatiyulla Kartage

5. Paramabhaagyavannu Koduva Arasararasage
Karava Mugidu Baagisona Shiragalaatage
Paripoornakaantage

Exit mobile version