ಸ್ತೋತ್ರ 226 Sureya Sevanam Tyajisu – O Maanavaa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಸುರೆಯ ಸೇವನಂ ತ್ಯಜಿಸು – ಓ ಮಾನವಾ
ಸುರೆಯ ಸೇವನಂ ವರ್ಜಿಸು
1. ಸುರೆಯಂ ಸೇವಿಸಿದರೆ ಮರುಳ್ಮಾಡಿ ಬುದ್ಧಿಯಂ
ದುರಿತಕೃತ್ಯಗಳನ್ನು ತ್ವರೆಯಿಂದಾಗಿಸುವ
2. ಕರಗಳಿಂ ದ್ರವ್ಯವ ಜರುಗಿಸುತ್ತಾತ್ಮಕೆ
ಕೊರತೆಯ ತಂದಿಟ್ಟು ಮರ್ಯಾದೆ ನೀಗಿಪ
3. ಮುರಿಯುತ್ತ ಸೊಬಗನ್ನು ಪರಿಪೂರ್ಣವಾಗಿಯೇ
ಪರಿಪರಿ ರೋಗವಂ ಶರೀರದೊಳ್ ಬರಿಸುವ
4. ಮರೆಹೊಕ್ಕಿರುವ ನಿನ್ನ ಹಿರಿಕಿರಿಯರಿಗೆಲ್ಲಾ
ನೆರೆಬಡತನವನ್ನು ತರುವಂಥ ಈ ದುಷ್ಟ
5. ದುರಿತವಿದೆಂಬುವದಂ ಮರೆವಂತೆ ಸವಿಯಿತ್ತು
ತರತರದ ಬೇನೆಗೆ ಗುರಿಯಾಗಮಾಡುವ
6. ನರನೇ ನಿನ್ನ ತಗ್ಗಿಸಿ ಧರಣಿಯೊಳ್ ಮೃಗಕ್ಕಿಂತ
ಪರವನ್ನು ತಪ್ಪಿಸಿ ನರಕದೊಳ್ ಸೇರಿಪ
7. ತೊರೆದು ಸುರಾಪಾನವ ಪಿರಿಯುತ್ಸಾಹಕ್ಕಾಗಿ
ಗುರುರಾಯನೀಯುವ ಪರಾಮತೀರ್ಥವ ಪಡಕೋ
Sureya Sevanam Tyajisu – O Maanavaa
Sureya Sevanam Varjisu
1. Sureyam Sevisidare Marulmaadi Buddhiyam
Duritakrutyagalannu Twareyindaagisuva
2. Karagalim Dravyava Jarugisuttaatmake
Korateya Tandittu Maryaade Neegipa
3. Muriyutta Sobagannu Paripoornavaagiye
Paripari Rogavam Shareeradol Barisuva
4. Marehokkiruva Ninna Hirikiriyarigellaa
Nerebadatanavannu Taruvantha Ee Dushta
5. Duritavidembuvadam Marevante Saviyittu
Taratarada Benege Guriyaaga maaduva
6. Narane Ninna Taggisi Dharaniyol Mrugakkinta
Paravannu Tappisi Narakadol Seripa
7. Toredu Suraapaanava Piriyutsaahakkaagi
Gururaayaneeyuva Paramateerthava Padako
