Site icon Treasure Hymns – Kannada

ಸ್ತೋತ್ರ 224 Parama Tande Ninna Neeyutsaaha ಸಾಹಿತ್ಯ

ಸ್ತೋತ್ರ 224 Parama Tande Ninna Neeyutsaaha ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಪರಮ ತಂದೇ ನಿನ್ನ ನೀಯುತ್ಸಾಹಕಾಲದಿ
ಸ್ವರವನ್ನೆತ್ತಿ ರಮ್ಯವಾಗಿ ಸ್ಮರಣೆಮಾಳ್ಪೆವೈ

1. ನಿರುಪಮಾನದೇವಾ ನಿನ್ನ ನಿರುತ ಪ್ರೇಮದಿ
ಸ್ಮರಿಸಿ ಭಜಿಪೆವೀಗ ನಾವು ಹರುಷರಾಗದಿ

2. ಲೋಕಸುಖದಿ ಕಾಲವೆಲ್ಲ ಲೋಲರಾಗದಿ
ನಾಕಾ ಸುಖವ ಬಯಸಿ ನಿನ್ನ ಪಾಡುತಿರ್ಪೆವು

3. ಲಕ್ಷದಿನದ ಲೋಖಭೋಗ ಲಕ್ಷ್ಯವಲ್ಲವು
ರಕ್ಷಣೆಯೊಂದು ದಿನವು ನಿನ್ನ ಸನಿಹವಿರ್ಪುದು

4. ಉಚಿತವಾದ ನಿನ್ನ ಗೃಹದಿ ಅಚಲಭಕ್ತಿಯಿಂ
ರುಚಿರವಾದ ನಿನ್ನ ದಯೆಯ ರುಚಿಸಿನೋಳ್ಪೆವು

5. ಸತ್ಯವಾಕ್ಯವನ್ನು ಮನದೆ ಸಡ್ದೆ ಮಾಳ್ವೆವು
ನಿತ್ಯ ನಿನ್ನ ಹತ್ರ ಬಿಡದೆ ನಿಂತುಕೊಳ್ವೆವು

6. ಕ್ರಿಸ್ತ ಯೇಸು ಪ್ರೀತಿಯನ್ನು ಕೀರ್ತಿಪಡಿಸಲು
ಶಿಸ್ತಿನಿಂದ ಸ್ವಾಮಿ ಬಳಿಗೆ ಕೂಡಿಬರುವೆವು

7. ಶಾಂತಜಲದಿ ನಮಗೆ ದಾಹಶಾಂತಿ ಮಾಡಿಸು
ಶಾಂತಗುಣವ ನಮ್ಮ ಮನದಿ ಸತತ ಹುಟ್ಟಿಸು

8. ದೀನಮನದೊಳೆಲ್ಲ ದಿನದಿ ನಿನ್ನ ನುತಿಸಲು
ಹಾನಿಸಂಶಯಗಳ ತೆಗಿಸು ಸಾನುರಾಗದಿ

9. ಪ್ರಣಯರೂಪಿ ಸತ್ಯದೇವಾ ಪ್ರಣತಿಪಾತ್ರನೇ
ಪ್ರಣುತಿ ಕೇಳು ನಿನ್ನ ನಾಮ ಶರಣುಮಾಳ್ಪೆವು

 

 

Parama Tande Ninna Neeyutsaaha kaaladi
Swaravanetti Ramyavaagi Smarane maalpevai

1. Nirupamaanadevaa Ninna Niruta Premadi
Smarisi Bhajipeveega Naavu Harusharaagadi

2. Lokasukhadi Kaalavella Lolaraagadi
Naaka Sukhava Bayasi Ninna Paadutirpevu

3. Lakshadinada Lokabhoga Lakshyavallavu
Rakshaneyondu Dinavu Ninna Sanihavirpudu

4. Uchitavaada Ninna Gruhadi Achalabhaktiyim
Ruchiravaada Ninna Dayeya Ruchisinolpevu

5. Satyavaakyavannu Manade Sadde Maalvevu
Nitya Ninna Hatra Bidade Nintukolvevu

6. Krista Yesu Preetiyannu Keertipadisalu
Shistininda Swaami Balige Koodibaruvevu

7. Shaantajaladi Namage Daahashaanti Maadisu
Shaantagunava Namma Manadi Satata Huttisu

8. Deenamanadolella Dinadi Ninna Nutisalu
Haanisamshayagala Tegisu Saanuraagadi

9. Pranayaroopi Satyadevaa Pranatipaatrane
Pranuti Kelu Ninna Naama Sharanumaalpevu

Exit mobile version