ಸ್ತೋತ್ರ 221 Karunisi Namma Praarthaneyannu Tande ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಕರುಣಿಸಿ ನಮ್ಮ ಪ್ರಾರ್ಥನೆಯನ್ನು ತಂದೇ
ಮರೆಯದೆ ಕೇಳಿ ಕೇಳಿ ರಕ್ಷಣೆ ಮಾಡು ಇಂದೇ
1. ಪ್ರಾಣಿಯೆಲ್ಲವ ಕಾಯುವಂಥವ ನೀನು
ತ್ರಾಣ ಪಾಲಿಸಿ ಧೈರ್ಯ ಹುಟ್ಟಿಸು ನೀನು
2. ರೋಗವೀದೇಶದಿ ಕಾಣಿಸಿಕೊಂಡು
ಈಗ ಪ್ರಾಣಿಗಳನ್ನು ಕೊಲ್ಲುತಿದೆ ಕಂಡು
3. ಶತ್ರುಸೈನ್ಯಗಳೆಷ್ಟು ಬಂದಿವೆ ತಂದೇ
ಮಿತ್ರನಾಗೆಮ್ಮನು ರಕ್ಷಿಸು ಮುಂದೆ
4. ತೆರೆಯಘೋಷವು ಬಲು ಹೆಚ್ಚಿದೆ ನೋಡು
ಪರನೇ ಹತ್ತಿರವಿದ್ದು ಶಾಂತಿಯ ಮಾಡು
5. ಈಗ ಮೋಡವು ಮುಚ್ಚಿಕೊಂಡಿದೆ ದೇವಾ
ಬೇಗ ಕತ್ತಲೆ ಹೋಗಲಾಡಿಸು ದೇವಾ
6. ಕೋಪದಿಂದೆಮ್ಮ ದ್ರೋಹನೋಡದೆ ಸ್ವಾಮೀ
ಪಾಪವೆಲ್ಲವ ನೀನು ಮನ್ನಿಸು ಪ್ರೇಮೀ
7. ಕಷ್ಟವೆಲ್ಲವ ತಾಳ ತ್ರಾಣವ ಕೊಡಿಸು
ಇಷ್ಟರೆಲ್ಲರ ನೀನು ಶುದ್ದಿಯ ಪಡಿಸು
Karunisi Namma Praarthaneyannu Tande
Mareyade Keli Keli Rakshane Maadu Inde
1. Praaniyellava Kaayuvanthava Neenu
Traana Paalisi Dhairya Huttisu Neenu
2. Rogaveedeshadi Kaanisikondu
Eega Praanigalannu Kollutide Kandu
3. Shatrusainyagaleshtu Bandive Tande
Mitranaagemmanu Rakshisu Munde
4. Tereyaghoshavu Balu Hechhide Nodu
Parane Hattiraviddu Shaantiya Maadu
5. Eega Modavu Muchhikondide Devaa
Bega Kattale Hogalaadisu Devaa
6. Kopadindemma Drohanodade Swaamee
Paapavellava Neenu Mannisu Premee
7. Kashtavellava Taala Traanava Kodisu
Ishtarellara Neenu Shuddiya Padisu
