Site icon Treasure Hymns – Kannada

ಸ್ತೋತ್ರ 219 nDeenapaalane Yesu Kartane – Maanavaruddaarane ಸಾಹಿತ್ಯ

ಸ್ತೋತ್ರ 219 nDeenapaalane Yesu Kartane – Maanavaruddaarane ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ದೀನಪಾಲನೇ ಯೇಸು ಕರ್ತನೇ – ಮಾನವರುದ್ದಾರನೇ
ದಾನಶೀಲನೇ ಸಾನುರಾಗದಿ – ಗಾನಮಾಳ್ಪೆವು ಸ್ವಾಮಿಯೇ

1. ಇಂದು ಸಂದ ಬೆಳೆಗಳಿಂದ – ಮಂದಭಾಗ್ಯರಿಗಾನಂದ
ಕುಂದಿಪೋದ ಆತ್ಮಗಳಿಗಾ – ನಂದವನು ನೆನೆ ತಂದಿಹ

2. ಬೀಜಗಳು ಬಿತ್ತಿ ನಾವು – ಮತ್ತೆ ಬಂದೆವು ಹಿಂದಕೆ
ಸೋಜಿಗದಿಂ ಬೆಳೆಯುವಂತೆ – ಮಾಡಿದಂಥ ಪೂಜ್ಯನೇ

3. ದೊರಕಿಸುವ ವರಗಳೊಡನೆ – ಎರಗಿಬೇಡುತ ಒಡೆಯನಂ
ಪರಮಹಿಮೆಯ ಸ್ತೋತ್ರಗಳನು – ನೆರೆದು ಸಲಿಪೆವು ಕಾವನೇ
4. ಜೀವನಾಯಕಾ ಪ್ರೇಮದಿಂದ – ಕಾವದೆಮ್ಮನು ಸರ್ವದಾ
ನಾವು ನಮ್ಮನ್ನು ನಿನ್ನ ಪಾದದ – ಸೇವೆಗರ್ಪಿಸಿ ಭಜಿಪೆವು

5. ಬೆಳೆದ ದವಸಧಾನ್ಯಗಳಿಂ – ಇಳೆಯನೆಲ್ಲಾ ಸಲಹುತ
ಗೆಲುವನಿರಿಸುತ್ತೆಲ್ಲರಲ್ಲಿ ಒಲುಮೆಯಿಂದಲಿ ಪಾಲಿಪ

 

 

Deenapaalane Yesu Kartane – Maanavaruddaarane
Daanasheelane Saanuraagadi – Gaanamaalpevu Swaamiye

1. Indu Sanda Belegalinda – Mandabhaagyarigaananda
Kundipoda Aatmagaligaa – Nandavanu Nene Tandiha

2. Beejagalu Bitti Naavu – Matte Bandevu Hindake
Sojigadim Beleyuvante – Maadidantha Poojyane

3. Dorakisuva Varagalodane – Eragibeduta Odeyanam
Paramahimeya Stotragalanu – Neredu Salipevu Kaavane

4. Jeevanaayakaa Premadinda – Kaavademmanu Sarvadaa
Naavu Nammannu Ninna Paadada – Sevegarpisi Bhajipevu

5. Beleda DavasaDhaanyagalim – Yileyanellaa Salahuta
Geluvanirisuttellaralli Olumeyindali Paalipa

Exit mobile version