Site icon Treasure Hymns – Kannada

ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ

ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಹಾಡುವ ಕೊಂಡಾಡುವ – ಪರಮೇಶನ
ಹಾಡುವ ಕೊಂಡಾಡುವ

1. ಹಾಡಿ ಪಾಪಗಳ ಬಿಸಾಡುತ ನಿಜವಾಗಿ
ಮಾಡುತ ಪ್ರಾರ್ಥನೆ ಕೂಡಿಕೊಂಡೆಲ್ಲರು

2. ಚಂದದ ಕ್ಷೇಮದಿಂದಿನ ವೇಳೆಯಂ
ಸಂಧಿಸಲು ಮಾಡಿದ ಸುಂದರಸ್ವಾಮಿಯಂ

3. ಭುವನ ಕಷ್ಟ ಬಿಡಿಸಿ ನವವತ್ಸರದೊಳಗೆ
ಸುವರವ ಕೊಡುವಂಥ ಭವದುರಿತಹರನಂ
4. ನೂತನದಿನದಲ್ಲಿ ಪ್ರೀತಿಭರಿತರಾಗಿ
ಪೂತ ಮಾನಸದಿಂದಾತನ ನಾಮವಂ

5. ಹೋದ ಕಾಲದೊಳು ಆದರಿಸಿದಂತೆಯೆ
ಮೇದಿನಿಯೊಳ್ಪಹ ಬಾಧೆಯಂ ನೀಗಲು

6. ದೋಷಪರಿಹಾರವ ಆಶಿಸಿ ಪಡೆದು ಸಂ
ತೋಷಿಸಲಿಕ್ಕೆ ಪ್ರಿಯದಾಸರಂ ಹೋಲುತ

7. ಪರತರಪ್ರಭಾವನೆ ಚರಣಾರವಿಂದವ
ಸ್ಥಿರಭಕ್ತಿಭಾವದಿ ಸ್ಮರಿಸುತ ನಿತ್ಯವೂ

 

 

Haaduva Kondaaduva – Parameshana
Haaduva Kondaaduva

1. Haadi Paapagala Bisaaduta Nijavaagi
Maaduta Praarthane Koodikondellaru

2. Chandada Kshemadindina Veleyam
Sandhisalu Maadida Sundaraswaamiyam

3. Bhuvana Kashta Bidisi Navavatsaradolage
Suvarava Koduvantha Bhavaduritaharanam

4. Nootanadinadalli Preetibharitaraagi
Poota Maanasadindaatana Naamavam

5. Hoda Kaaladolu Aadarisidanteye
Mediniyolpaha Baadheyam Neegalu

6. Doshaparihaarava Aashisi Padedu San
Toshisalikke Priyadaasaram Holuta

7. Parataraprabhaavane Charanaaravindava
Sthirabhaktibhaavadi Smarisuta Nityavoo

Exit mobile version