ಸ್ತೋತ್ರ 209 Parishudda Parishudda Parishudda Jeeyaa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪರಿಶುದ್ಧ ಪರಿಶುದ್ಧ ಪರಿಶುದ್ಧ ಜೀಯಾ
ನಿರುಪಮ ಭಜಿಸುವೆ ನಿನ್ನ ನಮ್ಮೊಡೆಯ
1. ಕರುಣದಿ ಕಾಯ್ದೆ ನೀನಿರುಳೊಳು ದೇವಾ
ಮರೆಯೆನು ನೀನಿಂದು ತೋರಿದ ದಯವ
2. ಕರುಣೆಯಿಂ ಪೊರೆ ನೀನು ಈ ದಿನ ಪ್ರಭುವೇ
ಶರಣೆಂದು ಬಂದಿಹ ನಾನು ನಿನ್ನಡಿಗೆ
3. ತೊಳೆದು ಎನ್ನಯ ಮನ ಮೊಳೆಯಿಸಿ ಮುದದೊಳ್
ಬೆಳೆಯಿಸು ಪ್ರೀತಿಯ ಲತೆಯನು ಅದರೊಳ್
4. ಆಗ ಬಾಳುವೆ ನಾನು ನಿನ್ನ ಕೂಸಾಗಿ
ಹೋಗಿ ಸಾರುವೆ ನಿನ್ನ ಪ್ರೀತಿಯ ಕೂಗಿ
5. ವಂದನೆ ತ್ರೈಯೈಕದೇವನೇ ನಿನಗೆ
ಇಂದೂ ಎಂದೆಂದಿಗೂ ಇಹಪರದೊಳಗೆ
Parishudda Parishudda Parishudda Jeeyaa
Nirupama Bhajisuve Ninna Nammodeya
1. Karunadi Kaayde Neenirulolu Devaa
Mareyenu Neenindu Torida Dayava
2. Karuneyim Pore Neenu Ee Dina Prabhuve
Sharanendu Bandiha Naanu Ninnadige
3. Toledu Ennaya Mana Moleyisi Mudadol
Beleyisu Preetiya Lateyanu Adarol
4. Aaga Baaluve Naanu Ninna Koosaagi
Hogi Saaruve Ninna Preetiya Koogi
5. Vandane Traiyekadevane Ninage
Indoo Endendigoo Ihaparadolage