ಸ್ತೋತ್ರ 205 Baalamitrane Ninna Balige ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಬಾಲಮಿತ್ರನೇ ನಿನ್ನ ಬಳಿಗೆ – ಮಕ್ಕಳೆಲ್ಲರ ಕರೆಯುತೆ
ಲಾಲನೆಯಿಂದಪ್ಪಿಕೊಂಡು – ಯೇಸುವೇ ನೀ ಹರಸಿದೆ
1. ಬರಲಿ ಮಕ್ಕಳು ನನ್ನ ಬಳಿಗೆ – ಪರಮಲೋಕದೊಳವರಿಗೆ
ಇರುವದು ಸ್ಥಳವೆಂದು ಹೇಳಿದೆ – ಪರಮರಕ್ಷಕಾ ಕರುಣೆಯಿಂ
2. ಅಂದು ಜರುಗಿದಾನಂದಚರಿತೆಯ – ನಿಂದು ನಾನು ಧ್ಯಾನಿಸೆ
ಕಂದ ನಾ ನಿನ್ನಂದ ಕರದೊಳ – ಗಂದು ಇದ್ದೊಡೇಮ್ ಧನ್ಯನೋ
3. ಬಾಲಬಾಲೆಯರೆಲ್ಲ ನಿನ್ನ ವಿ – ಶಾಲ ಪ್ರೀತಿಯೊಳ್
ಪಾಲುಗಾರರಾಗುತ ಬಹು – ಶೀಲದಿಂದಲೆ ನಡೆವೆವು
4. ನೀರುಮಲಮನದಿಂದ ಕೂಡಿ – ಗುರುವೇ ನಿನ್ನನ್ನು ಹುಡುಕಲು
ದರುಶಿಸಿ ನಿನ್ನ ಸ್ವರವ ಕೇಳಿ – ಹರುಷಭರಿತ ನಾಗುವೆ
5. ರಕ್ಷಣೆಯನು ಹೊಂದಿದವರಿಗೆ – ಮೋಕ್ಷದೊಳು ನಿವಾಸವ
ರಕ್ಷಕಾ ನೀ ಸಿದ್ಧಮಾಡಲು – ಏರಿದೆ ಪರಲೋಕಕೆ
6. ಅಲ್ಲಿ ಇರುತಿಹರೆಲ್ಲ ಮಕ್ಕಳು – ವಲ್ಲಭನನು ನೋಡುತ
ಸೊಲ್ಲಿನಿಂದಲೆ ನುತಿಸುತಿರುವರು – ಉಲ್ಲಸದಿಂ ಕೂಡುತ
7. ನಿನ್ನನರಿಯದ ಸಾವಿರಾರು – ಸಣ್ಣ ಸಣ್ಣ ಮಕ್ಕಳು
ಸನ್ನತಾ ನಿನ್ನೆಳಲ ಸೇರಿ – ಧನ್ಯರಾಗಲು ಬಯಸುವೆ
8. ಪರದೊಳವರಿಗೆ ವರನಿವಾಸವು – ದೊರೆಯಲನುಮತಿಇತ್ತಿಹೆ
ಪರಮಕೃಪೆಯನು ಹೊಂದಲವರ – ಕರೆದು ನಿನ್ನೊಳು ಸೇರಿಪೆ
9. ಮಂದೆಯೆಲ್ಲವು ಒಂದುಗೂಡುತ – ತಂದೆ – ದೇವನ ರಾಜ್ಯದೊಳ್
ಅಂದದಿಂದಲಿ ಬದುಕುವಂಥ – ಚಂದಕಾಲವನೊದಗಿಸು
Baalamitrane Ninna Balige – Makkalellara Kareyute
Laalaneyindappikondu – Yesuve Nee Haraside
1. Barali Makkalu Nanna Balige – Paramalokadolavarige
Iruvadu Stalavendu Helide – Paramarakshakaa Karuneyim
2. Andu Jarugidaananda chariteya – Nindu Naanu Dhyaanise
Kanda Naa Ninnanda Karadola – Gandu Iddodem Dhanyano
3. Baalabaaleyarella Ninna Vi – Shaala Preetiyol
Paalugaararaaguta Bahu – Sheeladindale Nadevevu
4. Nirumala Manadinda Koodi – Guruve Ninnannu Hudukalu
Darushisi Ninna Swarava Keli – Harushabharita naaguve
5. Rakshaneyanu Hondidavarige – Mokshadolu Nivaasava
Rakshakaa Nee Siddamaadalu – Eride Paralokake
6. Alli Irutiharella Makkalu – Vallabhananu Noduta
Sollinindale Nutisutiruvaru – Ullasadim Kooduta
7. Ninnanariyada Saaviraaru – Sanna Sanna Makkalu
Sannutaa Ninnelala Seri – Dhanyaraagalu Bayasuve
8. Paradolavarige Varanivaasavu – Doreyalanumatiyittihe
Paramakrupeyanu Hodalavara – Karedu Ninnolu Seripe
9. Mandeyellavu Ondugooduta – Tande – Devana Raajyadol
Andadindali Badukuvantha – Chandakaalavanodagisu
