Site icon Treasure Hymns – Kannada

ಸ್ತೋತ್ರ 190 Mangalam Mangalam Vadhoovararige ಸಾಹಿತ್ಯ

ಸ್ತೋತ್ರ 190 Mangalam Mangalam Vadhoovararige ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಮಂಗಳಂ ಮಂಗಳಂ ವಧೂವರರಿಗೆ
ಮಂಗಳಂ ಮಂಗಳಂ ಜಯ ಜಯ
ಮಂಗಳಂ ಮಂಗಳಂ

1. ಮೋದದ ಕರ್ತನು ಆದಮ ಹವ್ವಳಿಗೆ
ಏದೇನಿನೊಳಾಶೀರ್ವಾದವಿತ್ತಂತೆ
ಭೇದವಿಲ್ಲದಿವರ ಕಾದು ಕಟಾಕ್ಷಿಸಿ
ಶೋಧನೆ ಹರಿಸುತಲಾದರವೀಯಲಿ

2. ಮಾನವರೊಳ್ಮದುವೆ ಸಾನುಕೂಲವೆಂದು
ಸಾನಂದದಿಂದೇಸು ಕಾನದ ಪ್ರಸ್ತಕ್ಕೆ
ತಾನೆ ಪೋಗಿಯೇ ಆನಂದಗೈದಂತೆ
ನ್ಯೂನವಿಲ್ಲದಂಥ ಮಾನವ ನೀಡಲಿ

3. ಧರಣಿಯ ಪಯಣದೊಳ್ ಬರುವದಕ್ಕಿರುವದು
ರ್ಭರದ ಬಾಧೆಗಳನು ಪರಿಪೂರ್ಣವಾಗಿಯೇ
ನಿರುಪಮ ಸ್ವಾಮಿಯು ವರಪ್ರೇಮದಿಂದಲೇ
ಪರಿಹಾರಮಾಡುತ ಹರಸಲಿ ನಿತ್ಯವೂ

4. ಧರೆಯೊಳಗೀರ್ವರು ಪರಸ್ಪರ ಸ್ನೇಹದಿ
ಕರಕರೆಗಳಿಲ್ಲದೆ ಹರುಷದಿ ಜೀವಿಸಿ
ಮರಣದ ಮಟ್ಟಿಗೂ ಸ್ಥಿರದೈಕ್ಯ ತಪ್ಪದೆ
ಪರಿಪರಿ ವರದಿಂದ ಪರಿಣಾಮವಾಗಲಿ

5. ಪರಮ ಯೆಹೋವನ ಪರಿಶುದ್ಧ ವಿಧಿಗಳ
ತೊರೆಯದೆಂದಿಗೂ ಸ್ಮರಿಸುತ್ತಲಿಬ್ಬರು
ವರದ ಸದ್ಗುರುವಿನ ಕರುಣೆಯ ಸಾರುತ
ಹರುಷದಿಂದ ಬಾಳಿ ಪರಭಾಗ್ಯ ಪಡೆಯಲಿ

 

 

Mangalam Mangalam Vadhoovararige
Mangalam mangalam Jaya Jaya
Mangalam Mangalam

1. Modada Kartanu Aadama Havvalige
Edeninolaasheervaada vittante
Bhedavilladivara Kaadu Kataakshisi
Shodhane Harisuta laadara veeyali

2. Maanavarolmaduve Saanukoolavendu
Saanandadindesu Kaanada Prastakke
Taane Pogiye Anandagaidante
Nyoonyavilladantha Maanava Needali

3. Dharaniya Payanadol Baruvadakkiruvadu
Rbharada Baadhegalanu Paripoornavaagiye
Nirupama Swaamiyu Varapremadindale
Parihaara maaduta Harasali Nityavoo

4. Dharayolageervaru Paraspara Snehadi
Karakaregalillade Harushadi Jeevisi
Maranada Mattigoo Sthiradaikya Tappade
Paripari Varadinda Parinaamavaagali

5. Parama Yehovana Parishudda Vidhigala
Toreyadendigoo Smarisuttalibbaru
Varada Sadguruvina Karuneya Saaruta
Harushadinda Baali Parabhaagya Padeyali

Exit mobile version