Site icon Treasure Hymns – Kannada

ಸ್ತೋತ್ರ 181 Devara Nagarado Sobagu – Entha ಸಾಹಿತ್ಯ

ಸ್ತೋತ್ರ 181 Devara Nagarado Sobagu – Entha ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ದೇವರ ನಗರದೋ ಸೊಬಗು – ಎಂಥ
ದಾವರಣಭಿತ್ತಿಯ ಬೆಡಗು
ಆವ ಮಾನವನೆಂದೂ ವರ್ಣಿಸಲಾಗದ
ಆವಾಸ ನಾಲ್ವೆಡೆಗೆ ವಿಸ್ತಾರವಾಗಿಹದು

1. ಅಲ್ಲಿನ ನಗರವಾಸಿಗಳು – ಸತ್ಯ
ದಲ್ಲಿ ನೆಲೆಯಾಗಿ ನಿಂತವರು
ಅಲ್ಲಿಹ ಸಭೆಯೊಂದೇ ಯೋಧರ ಗುಂಪೊಂದೆ
ಅಲ್ಲಿಹ ಜನರಿಗೆ ದೃಢವಾದ ಗುರಿಯೊಂದೇ

2. ಕೂಡುತೆಲ್ಲರು ಸೇವಿಸುವರು – ರಾಗ
ಹಾಡಿ ದೇವನ ಸ್ತುತಿಸುವರು
ಬೇಡುತೀಶನಪಾದಕನುದಿನ ವಂದನೆ
ಮಾಡುತ ಸಂತಸದಿಂದ ಜೀವಿಸುವರು

3. ಆದಿಯಿಂದ ನಿನ್ನ ವಾಕ್ಯ – ಬಂದು
ಮೇದಿನಿಯನಾವರಿಸುತ
ಮೋದಪ್ರೀತಿಸತ್ಯ ಸ್ವಾತಂತ್ರ್ಯ ಸಮ್ಮತ
ವಾದ ರಾಜ್ಯವನ್ನು ಹಬ್ಬಿಸುತ್ತಿರುವದು

4. ಇರುಳೊಳು ಜ್ಯೋತಿಯು ಬೆಳಗಿ – ಬಿಡದೆ
ಹೊರಡಿಸುತಿಹದು ಕಾವಳ
ಮೆರೆಯುತ ಸೌಧಶಿಖರಗಳಿಂದಾನಗರ
ವರದೈವಜ್ಞಾನವ ಸೌಭಾಗ್ಯದಿಂ ರಾಜಿಪ

5. ನಿತ್ಯವಾದೀ ಭವ್ಯನಗರ – ಇಹುದು
ನಿತ್ಯ ಬಂಡೆಯ ಮೇಲೆ ನೆಲಸಿ
ಸತ್ಯದಿ ಸ್ಥಿರವಾದೀನಗರವು ಮಣಿಯದು
ನಿತ್ಯವು ಹೊಳೆ ಮಳೆಗಳು ವಿಷ್ಟು ಬಡಿದರೂ

 

 

Devara Nagarado Sobagu – Entha
Daavaranabhittiya Bedagu
Ava Maanavanendoo Varnisalaagada
Avaasa Naalvedege Vistaaravaagihadu

1. Allina Nagaravaasigalu – Satya
Dalli Neleyaagi Nintavaru
Alliha Sabheyonde Yodhara Gumponde
Alliha Janarige Drudhavaada Guriyonde

2. Koodutellaru Sevisuvaru – Raaga
Haadi Devana Stutisuvaru
Beduteeshana paadakanudina Vandane
Maaduta Santasadinda Jeevisuvaru

3. Aadiyinda Ninna Vaakya – Bandu
Mediniyanaavarisuta
Modapreetisatya Swaatantrya Sammata
Vaada Raajyavannu Habbisuttiruvadu

4. Irulolu Jyotiyu Belagi – Bidade
Horadisutihadu Kaavala
Mereyuta Soudhashikharagalindaanagara
Varadaivagnaanava Soubhaagyadim Raajipa

5. Nityavadee Bhavyanagara – Ihudu
Nitya Bandeya Mele Nelasi
Satyadi Sthiravaadeenagaravu Maniyadu
Nityavu Hole Malegalu Vishtu Badidaroo

Exit mobile version