ಸ್ತೋತ್ರ 177 Kaanikegalannoyyuva – Devara Manege ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಕಾಣಿಕೆಗಳನ್ನೊಯ್ಯುವ – ದೇವರ ಮನೆಗೆ
ಪ್ರಾಣದಾನವನಿತ್ತ – ಮಾನ್ಯ ರಕ್ಷಕನಿಗೆ
1. ಮಡದಿ ಮಕ್ಕಳೊಂದಿಗೆ – ಕಡುನಲ್ಮೆಯಿಂದಲಿ
ನಡೆದು ದೇವಾಲಯ – ದೆಡೆಗೆ ಭಕ್ತಿಯಲಿ
ಪೊಡವಿಯೊಡೆಯ ಯೇಸು – ವಡಿಯ ಬಳಿಯಲೆಮ್ಮ
ಬಡಕಾಣಿಕೆಗಳಿಟ್ಟು – ಪಡೆವ ಸಮ್ಮೋದವ
2. ದೇವರ ರಾಜ್ಯದ – ದಿವ್ಯಸಂತೋಷವು
ಭೂವಲಯದೊಳೆಲ್ಲ – ವ್ಯಾಪಿಸಲೆಂದು
ಆವ ವಂಚನೆ ನಮ್ಮ – ಭಾವದೊಳಿರಿಸದೆ
ದೈವಸನ್ನಿಧಿಗೀಗ – ಧಾರಾಳಮತಿಯಿಂದ
3. ಸಭೆಯ ಕಾರ್ಯಗಳೆಲ್ಲ – ಶುಭವಾಗಿ ನಡೆವಂತೆ
ಅಭಿಮಾನವನು ಪೊಂದಿ – ಆಸಕ್ತಿಯಿಂದ
ಪ್ರಭುರಾಜ್ಯಬರಲೆಂದು – ಭಕ್ತಾಳಿಗೆ ಇಂದು
ಅಭಯಹಸ್ತವನಿತ್ತು – ಮುಂದೆ ಸಾಗಿರಿಯೆಂದು
4. ಮನದೊಳು ಸ್ವಾರ್ಥವ – ನುಳಿದು ತ್ಯಾಗವ ಮಾಡಿ
ಘನದಿ ಪರಹಿತಾರ್ಥ – ಕಾಂಕ್ಷೆಯ ಹೂಡಿ
ತನುತ್ಯಾಗಿ ಯೇಸುವಿನ – ಘನನಿದರ್ಶನ ನೋಡಿ
ಮನುಜಾಳಿಗೆ ಮುಕ್ತಿ – ಯಾಗಲೆನ್ನುತ ಬೇಡಿ
5. ತ್ಯಾಗವೇ ಗುರುಕಾಂಕ್ಷೆ ತ್ಯಾಗವೇ ಸಂತೋಷ
ತ್ಯಾಗವಂ ಜನ್ಮಸಾ – ಫಲ್ಯದ ಸಾಕ್ಷ್ಯ
ತ್ಯಾಗದಿಂದಲೇ ದೇಶ – ಯೋಗಕ್ಷೇಮವಪ್ಪುದು
ಈಗ ಸದ್ಭಕ್ತಿವೈರಾಗ್ಯದಿಂದಲಿ ನಮ್ಮ
Kaanikegalannoyyuva – Devara Manege
Praanadaanavanitta – Maanya rakshakanige
1. Madadi makkalondige – Kadunalmeyindali
Nadedu Devaalaya – Dedege Bhaktiyali
Podaviyodeya Yesu – Vadiya Baliyalemma
Badakaanikegalittu – Padeva Sammodava
2. Devara Raajyada – Divyasantoshavu
Bhoovalayadolella – Vyaapisalendu
Ava Vanchane Namma – Bhaavadolirisade
Daivasannidhigeega – Dhaaraalamatiyinda
3. Sabheya Kaaryagalella – Shubhavaagi Nadevante
Abhimaanavanu Pondi – Aasaktiyinda
Prabhuraajya baralendu – Bhaktaalige Indu
Abhayahastavanittu – Munde Saagiriyendu
4. Manadolu Swaarthava – Nulidu Tyaagava Maadi
Ghanadi Parahitaartha – Kaanksheya Hoodi
Tanutyaagi Yesuvina – Ghananidarshana Nodi
Manujaalige Mukti – Yaagalennuta Bedi
5. Tyaagave Gurukaankshe Tyaagave Santosha
Tyaagavam Janmasaa – Phalyada Saakshya
Tyaagadindale Desha – Yogakshemavappudu
Eega Sadbhakti vairaagyadindali Namma