ಸ್ತೋತ್ರ 173 Enna Devare Ninage – Kaanike Taralu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಎನ್ನ ದೇವರೇ ನಿನಗೆ – ಕಾಣಿಕೆ ತರಲು
ಇನ್ನೇನಿದೆ ಎನಗೆ
ಸಣ್ಣ ಕಾಣಿಕೆಯೊಂದ ತರುವೆ
ಎನ್ನಾತ್ಮವ ಜೀವವ ದೇಹವ ಎಲ್ಲರ
ಇನ್ನು ಬೇರೊಂದಿಲ್ಲವೆನಗೆ
ಇನ್ನಿರೆ ನಾನಾದನೂ ತರುವೆ
1. ನಿನ್ನದಾಯಿತೆನ್ನಾತ್ಮವು – ಎನ್ನವನಲ್ಲ
ನಿನ್ನವನಾದೆ ನಾನು
ನಿನ್ನ ತೋಷವ ಪಡೆದು ನಿನ್ನ ಸಂ
ಪನ್ನವಂ ಪ್ರೇಮವಂ ಭಕ್ತಿಯಂ ನಿರೀಕ್ಷೆಯಂ
ನಿನ್ನ ಮಹಿಮೆಯ ನಿತ್ಯಕಾಲದೊ
ಳೆನ್ನ ಬಾಳೊಳು ತೋರು ದೇವಾ
2. ನಿನ್ನದೇ ಎನ್ನ ದೇಹವು – ನಿನ್ನಾಲಯದಿ
ನಿನ್ನ ಚಿತ್ತ ಸಾಗುವದು
ನಿನ್ನ ಬೆಳಕನು ಪ್ರಜ್ವಲಿಸು
ಇನ್ನದರೊಳು ನಿತ್ಯವು ವಾಸಿಸು ವರ್ತಿಸು
ನಿನ್ನ ಪ್ರೇಮದಿ ತುಂಬಿಸೆನ್ನ ಸಂ
ಪನ್ನಜೀವದ ನಿಧಿಯೇ ದೇವಾ
3. ಪರದಿಂದ ನಿನ್ನ ರೂಪವ – ಹೊದಿಸನೆಲಗೆ
ವರಶೃಂಗಾರವದೆನಗೆ
ಪರಿಶುದ್ದತೆಯು ದೀನತೆಯು
ಅರಿಮೆಯು ಪ್ರೀತಿಯು ತಾಳ್ಮೆಯು ಭಕ್ತಿಯು
ಮೆರೆವವಧಿಕಕಾಂತಿಯೊಡನೆ
ಧರೆಯ ಮುತ್ತುರತ್ನಾದಿಗಳ ಮೇಲ್
4. ನಿನ್ನ ನಾಮವ ಪಡೆದಿರುವೆ – ಅದರಿಂದಲೇ
ನಿನ್ನಾತ್ಮ ಬಲವೀಯೆನಗೆ
ಎನ್ನ ನೆನಪುಗಳೆಲ್ಲವೂ
ನಿನ್ನಲ್ಲಿಯೇ ಐಕ್ಯತೆ ಹೊಂದಲಿ ದೇವನೇ
ನಿನ್ನ ಪ್ರೀತಿಯಿಂದೆನ್ನ ಸೇವೆಯು
ನಿನ್ನ ಮೈಮೆಯ ಸಾರಿ ಪೊಗಳಲಿ
Enna Devare Ninage – Kaanike Taralu
Innenide Enage
Sanna Kaanikeyonda Taruve
Ennaatmava Jeevava Dehava Ellara
Innu Berondillavenage
Innire Naanadanoo Taruve
1. Ninnadaayitennaatmavu – Ennavanalla
Ninnavanaade Naanu
Ninna Toshava Padedu Ninna San
Pannavam Premavam Bhaktiyam Nireeksheyam
Ninna Mahimeya Nityakaalado
Lenna Baalolu Toru Devaa
2. Ninnade Enna Dehavu – Ninnaalayadi
Ninna Chitta Saaguvadu
Ninna Belakanu Prajwalisu
Innadarolu Nityavu Vaasisu Vartisu
Ninna Premadi Tumbisenna San
Pannajeevada Nidhiye Devaa
3. Paradinda Ninna Roopava – Hodisanelage
Varashrungaaravadenage
Parishuddateyu Deenateyu
Arimeyu Preetiyu Taalmeyu Bhaktiyu
Merevavadhika kaantiyodane
Dhareya Mutturatnaadigala Mel
4. Ninna Naamava Padediruve – Adarindale
Ninnaatma Balaveeyenage
Enna Nenapugalellavoo
Ninnalliye Aikyate Hondali Devane
Ninna Preetiyindenna Seveyu
Ninna Maimeya Saari Pogalali