ಸ್ತೋತ್ರ 172 Devara Seveya Kaalavidu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇವರ ಸೇವೆಯ ಕಾಲವಿದು – ನಿಜ
ದೇವರ ಸೇವೆಯ ಕಾಲವಿದು
ಪಾವನಚಿತ್ತದಿಂ ಸೇರಿ ಯೆಹೋವನ
ಸೇವಿಸೆ ಜೀವಕ್ಕೆ ಕ್ಷೇಮವಿದೆ
1. ತಂದೆಯ ಮನೆಯನ್ನು ಹುಡುಕುವೆವು – ನಮ
ಗೆಂದು ವರಗಳನ್ನು ಬೇಡುವೆವು
ಕುಂದಿದ ಮನದಿಂ ಪ್ರಾರ್ಥಿಸಿ ಲೋಕದ
ತೊಂದರೆ ನೀಗಿಸಿ ಸೇರುವೆವು
2. ಮರ್ಮಗಳೆಲ್ಲವ ವಿವರಿಸುವ – ಸತ್
ಕರ್ಮಗಳೆಲ್ಲವ ಸ್ಥಾಪಿಸುವ
ನಿರ್ಮಲ ಆತ್ಮನಿಂ ಬೋಧನೆ ಪಡೆಯ ಸು
ಧರ್ಮದ ಸೇವೆಯ ಕಾಲವಿದು
3. ಸತ್ಯದ ಮಾರ್ಗದಿ ಶಕ್ತಿಯನ್ನು – ಸತ್
ಕೃತ್ಯಮಾಡೆ ದೈವಬಲವನ್ನು
ನಿತ್ಯವು ಭಕ್ತರಪೇಕ್ಷಿಸಿ ಕೋರಿವ
ಸತ್ಯದ ಪ್ರಾರ್ಥನೆ ಕಾಲವಿದು
4. ಕುಂದದೆ ಪ್ರಾರ್ಥನೆ ಮಾಡುವೆವು – ನಮ್ಮ
ತಂದೆಯ ಕೃಪೆಯನು ಬೇಡುವೆವು
ಇಂದೆಮ್ಮ ಪ್ರಾರ್ಥನೆ ತಂದೆಗೆ ಮುಟ್ಟಲು
ಬಂದೆಮ್ಮ ನಾತನು ಕೇಳುವನು
Devara Seveya Kaalavidu – Nija
Devara Seveya Kaalavidu
Paavanachittadim Seri Yehovana
Sevise Jeevakke Kshemavide
1. Tandeya Maneyanu Hudukuvevu – Nama
Gendu Varagalanu Beduvevu
Kundida Manadim Praarthisi Lokada
Tondare Neegisi Seruvevu
2. Marmagalellava Vivarisuva – Sat
Karmagalellava Staapisuva
Nirmala Aatmanim Bodhane Padeya Su
Dharmada Seveya Kaalavidu
3. Satyada Maargadi Shaktiyanu – Sat
Krutyamaade Daivabalavannu
Nityavu Bhaktarapekshisi Koriva
Satyada Praarthane Kaalavidu
4. Kundade Praarthane Maaduvevu – Namma
Tandeya Krupeyanu Beduvevu
Indemma Praarthane Tandege Muttalu
Bandemma Naatanu Keluvanu
