ಸ್ತೋತ್ರ 169 Bandemma Japakuttarava Tandu Paalisai – Swaamee ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಬಂದೆಮ್ಮ ಜಪಕುತ್ತರವ ತಂದು ಪಾಲಿಸೈ – ಸ್ವಾಮೀ
ಇಂದೇ ಪಾಲಿಸೈ
1. ದುಂದುತನದ ನಡತೆಯಿಂದ ನೊಂದು ಹೋದೆನು – ಕರ್ಮ
ಬಂಧನಾದೆನು
2. ಹರಿಸು ಕರ್ಮ ಒರಸು ದುಃಖವ ಬರಿಸು ಪ್ರೇಮವ – ಎನ್ನೊ
ಳಿರಿಸು ಚಿತ್ತವ
3. ತಂದೆತಾಯಿ ಬಂಧುಜನರನೊಂದುಮಾಡಿಸು – ನಿನ್ನೊ
ಳಿಂದೂ ಕೂಡಿಸು
4. ದುಷ್ಟಜನರು ಮಾರ್ಗಬಿಟ್ಟು ಶಿಷ್ಟರಾಗಲಿ – ಅತಿ
ನಿಷ್ಠರಾಗಲಿ
5. ದಯದ ವಾಕ್ಯ ಸಕಲರೊಳಗೂ ಭಯವ ಬಿಡಿಸಲಿ – ಬಹು
ಜಯವ ಪಡೆಯಲಿ
6. ಸತ್ಯ ಸಭೆಯು ಧರಣಿಯಲ್ಲಿ ನಿತ್ಯ ಹೆಚ್ಚಲಿ – ಅದರ
ಕೃತ್ಯ ಮೆಚ್ಚಲಿ
7. ಲೋಕದವರೆಲ್ಲಾ ಕೂಡಿ ಏಕವಾಗಲೀ – ಪರ
ಲೋಕ ಸೇರಲಿ
Bandemma Japakuttarava Tandu Paalisai – Swaamee
Inde Paalisai
1. Dundutanada Nadateyinda Nondu Hodenu – Karma
Bandhanaadenu
2. Harisu Karma Orasu Dukhava Barisu Premava – Enno
Lirusu Chittava
3. Tandetaayi Bandhujanara nondumaadisu – Ninno
Lindoo Koodisu
4. Dushtajanaru Maargabittu Shishtaraagali – Ati
Nishtaraagali
5. ADayada Vaakya Sakalarolagoo Bhayava Bidisali – Bahu
Jayava Padeyali
6. Satyasabheyu Dharaniyalli Nitya Hechhali – Adara
Krutya Mechhali
7. Lokadavarellaa Koodi Ekavaagalee – Para
Loka Serali
