ಸ್ತೋತ್ರ 166 Nadisayyaa Enna Prathane – Kristesuve ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ನಡಿಸಯ್ಯಾ ಎನ್ನ ಪ್ರಾಥನೆ – ಕ್ರಿಸ್ತೇಸುವೇ
ಬಿಡಿಸಯ್ಯಾ ಮನೋವೇದನೆ
ಪೊಡವಿಯಲಿ ನಿನ್ನಯಾಸರೆ ಹುಡುಕದೆ
ಪಡೆಯದೆ ಪಿಡಿಯದೆ ತೊಡರಿದೆ
ಒಡನೆ ಈಕ್ಷಿಸುತ್ತ ಹೇಗೂ ಕಡಿಮೆಯಾಗದ ಪ್ರೇಮದಿಂದ
1. ದುಂದುತನದಿಂ ನೊಂದೆನೈ ಈ ಲೋಕದೊ
ಳಂಧಕಾರವನೊಲಿದೆನೈ
ಚಂದದಿಂದಾದರಿಪರಿಲ್ಲ ಹಿಂದಕೂ
ಮುಂದಕೂ ಇಂದಿಗೂ ಎಂದಿಗೂ
ಕುಂದಿಕುಂದಿ ತ್ವರಿತದಿಂದ ಬಂದದಾಸನ ತಳ್ಳಿಬಿಡದೆ
2. ಭ್ರಷ್ಟ ಭುವನದ ಭೋಗವಂ – ತಪ್ಪದೆ ತಾ ನಿ
ಕೃಷ್ಟ ಮಾಡುವ ಕಾಟವಂ
ಎಷ್ಟು ತಾಳುತಲಿರಲಿ ದುಷ್ಟಾರಿಷ್ಟವಂ
ಕಷ್ಟವಂ ನಷ್ಟವಂ ವಿಷ್ಟಿಯಂ
ಶಿಷ್ಟರೊಂದಿಗೆ ಕೂಡಿಕೊಂಡು ತುಷ್ಟಿಯಂ ನಾ ಹೊಂದುವಂತೆ
3. ಪರಮ ಕರ್ತನೇ ರಕ್ಷಿಸೈ – ಕೃಪೆಯಿಂದಲೇ
ಧರೆಯಲ್ಲಿ ಪರಿಪಾಲಿಸೈ
ಗುರುವೇ ನಿನ್ನ ಕರುಣೆಯನ್ನು ಸ್ಮರಿಸುವೆ
ಅರಸುವೆ ವರಿಸುವೆ ಮೆರೆಸುವೆ
ದುರಿತಗಳನ್ನು ಕ್ಷಮಿಸುತ್ತ ಸುವರಗಳಿಂದಲೇ ಪೋಷಿಸಿ
4. ಹೀನತನವನು ನೀಗಿಸೈ – ವಿಘೋರವಾದ
ಹಾನಿಯಿಂದಲೇ ತಪ್ಪಿಸೈ
ಧೀನನಾಗಿಯೇ ದಿವ್ಯವಾದ ಧ್ಯಾನವಂ
ದಾನವಂ ಮಾನವಂ ಜ್ಞಾನವಂ
ಸಾನುರಾಗದಿಂದ ನುತಿಸಲು ಸಾನುಕೂಲವನ್ನು ಮಾಡುತ
5. ಕಾಡುವ ಇಹದಾರ್ತಿಯಂ – ಸರ್ವೇಶಾ ಬಿ
ಸಾಡಿಸದರ ಕೀರ್ತಿಯಂ
ಓಡಿ ನಿತ್ಯ ಸುನಾಮವ ಕೊಂಡಾಡುವೆ
ಪಾಡುವೆ ನೋಡುವೆ ಬೇಡುವೆ
ಕಾಡು ಗುಣದಿಂದಾಗುವಂಥ ಪೀಡೆಗಳನ್ನು ಪೋಗಿಸುತ್ತಲೇ
Nadisayyaa Enna Prathane – Kristesuve
Bidisayyaa Manovedane
Podaviyali Ninnayaasare Hudukade
Padeyade Pidiyade Todaride
Odane Eekshisutta Hegoo Kadimeyaagada Premadinda
1. Dundutanadim Nondenai Ee Lokado
Landhakaarava nolidenai
Chandadindaadariparilla Hindakoo
Mundakoo Indigoo Endigoo
Kundikundi Twaritadinda Bandadaasana Tallibidade
2. Bhrashta Bhuvanada Bhogavam – Tappade Taa Ni
Krushta Maaduva Kaatavam
Eshtu Taalutalirali Dushtaarishtavam
Kashtavam Nashtavam Vishtiyam
Shishtarondige Koodikondu Tushtiyam Naa Honduvante
3. Parama Kartane Rakshisai – Krupeyindale
Dhareyalli Paripaalisai
Guruve Ninna Karuneyannu Smarisuve
Arasuve Varisuve Meresuve
Duritagalannu Kshamisutta Suvaragalindale Poshisi
4. Heenatanavanu Neegisai – Vighoravaada
Haaniyindale Tappisai
Dheenanaagiye Divyavaada Dhyaanavam
Daanavam Maanavam Gnaanavam
Saanuraagadinda Nutisalu Saanukoolavannu Maaduta
5. Kaaduva Ihadaartiyam – Srveshaa Bi
Saadisadara Keertiyam
Odi Nitya Sunaamava Kondaaduve
Paaduve Noduve Beduve
Kaadu Gunadindaaguvantha Peedegalannu Pogisuttale
