ಸ್ತೋತ್ರ 165 Tande Ninna Sakala Janaru ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ತಂದೆ ನಿನ್ನ ಸಕಲ ಜನರು ಬಂದು ಭಜಿಸಲಿ – ಘನ
ದಿಂದ ನುತಿಸಲಿ
1. ಬದ್ಧವಾಗಿ ನಿನ್ನ ನಾಮ ಶ್ರದ್ಧೆ ಹೊಂದಲಿ – ಪರಿ
ಶುದ್ಧವಾಗಲಿ
2. ನಿನ್ನ ರಾಜ್ಯ ಧರಣಿಯಲ್ಲಿ ಇನ್ನು ಹೆಚ್ಚಲಿ – ಪಾಪ
ಭಿನ್ನವಾಗಲಿ
3. ಧರಣಿಯಲ್ಲಿ ನಿನ್ನ ಚಿತ್ತ ಜನರು ಮಾಡಲಿ – ಪರ
ಗುರುವ ಸೇರಲಿ
4. ಇಂದು ನಮಗೆ ದಿನದ ರೊಟ್ಟಿ ತಂದು ಪಾಲಿಸು – ಕೃಪೆ
ಯಿಂದ ರಕ್ಷಿಸು
5. ಪಾಪವೆಲ್ಲ ಕ್ಷಮಿಸಿ ನಿನ್ನ ಕೋಪ ತೊಲಗಿಸು – ಎಲ್ಲಾ
ಪಾಪ ನೀಗಿಸು
6. ಶೋಧನೆಗಳ ಹರಸಿ ನಮ್ಮ ವೇಧೆ ತಪ್ಪಿಸು – ಪರಮ
ಬೋಧೆ ಮಾಡಿಸು
7. ಬಲವು ಮಹಿಮೆ ರಾಜ್ಯ ನಿನಗಧೀನವಾಗಲಿ – ಎಲ್ಲಾ
ಫಲವು ಆಗಲಿ
Tande Ninna Sakala Janaru Bandu Bhajisali – Ghana
Dinda Nutisali
1. Baddhavaagi Ninna Naama Shraddhe Hondali – Pari
Shuddavaagali
2. Ninna Raajya Dharaniyalli Innu Hechchali – Paapa
Bhinnavaagali
3. Dharaniyalli Ninna Chitta Janaru Maadali – Para
Guruva Serali
4. Indu Namage Dinada Rotti Tandu Paalisu – Krupe
Yinda Rakshisu
5. Paapavella Kshamisi Ninna Kopa Tolagisu – Ellaa
Paapa Neegisu
6. Shodhanegala Harasi Namma Vedhe Tappisu – Parama
Bodhe Maadisu
7. Balavu Mahime Raajya Ninagadheenavaagali – Ellaa
Phalavu Aagali